Independence Day 2022 : ದೇಶವು ಸ್ವಾತಂತ್ರೋತ್ಸವದ ಸಂಭ್ರಮ ಆಚರಿಸಲು ತಯಾರಾಗುತ್ತಿದೆ. ಈ ಆಗಷ್ಟ್ 15 ಕ್ಕೆ ಬ್ರಿಟಿಷರ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಲಿವೆ. ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಸಿದ್ಧತೆಗಳು ಭರದ ನಡೆಯುತ್ತಿವೆ. ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಬಾರಿಯೂ ಬುಲೆಟ್ ಪ್ರೂಫ್ ಬಾಕ್ಸ್ ಇಲ್ಲದೆ ಭಾಷಣ ಮಾಡುತ್ತಿದ್ದರು. ಭಾಷಣ ಮಾಡಿದ ನಂತರ, ಅವರು ಪ್ರೋಟೋಕಾಲ್ ಅನ್ನು ಮುರಿದು ಅಲ್ಲಿ ಬಂದಿರುವ ಮಕ್ಕಳನ್ನು ಭೇಟಿ ಮಾಡುತ್ತಾರೆ. ಆದ್ರೆ, ಈ ಭಾರಿ ಅಲ್ಲಿ ಬುಲೆಟ್ ಪ್ರೂಫ್ ಬಾಕ್ಸ್ ಹಾಕಲಾಗುತ್ತಿದೆ. ಯಾಕೆ ಈ ವೇದಿಕೆ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಈ ಬಾರಿ ಸಂಪ್ರದಾಯ ಬದಲಾಗುವುದೇ?


 ನರೇಂದ್ರ ಮೋದಿಯವರಿಗಿಂತ ಮೊದಲು ಆದ ಎಲ್ಲಾ ಪಿಎಂಗಳು ಬುಲೆಟ್ ಪ್ರೂಫ್ ಬಾಕ್ಸ್ ನಲ್ಲಿ ಭಾಷಣ ಮಾಡುತ್ತಿದ್ದರು. ಆದರೆ ಮೋದಿಯವರು ಪ್ರಧಾನಿಯಾದ ನಂತರ ಯಾವುದೇ ಭದ್ರತೆ ಇಲ್ಲದೆ ಅಲ್ಲಿ ನಿಂತು ಭಾಷಣ ಮಾಡುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಆದರೆ ಈ ಬಾರಿ ಏನಾದರೂ ವ್ಯತ್ಯಾಸವಾಗಲಿದೆಯೇ? ಬುಲೆಟ್ ಪ್ರೂಫ್ ಬಾಕ್ಸ್ ನಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರಾ ಪ್ರಧಾನಿ ಮೋದಿ? ಎಂಬ ಊಹಾಪೋಹಗಳಿಗೆ ಈ ಫೋಟೋ ಕಾರಣವಾಗಿದೆ. ಈ ಫೋಟೋ ಅವನ್ನು ಸುದ್ದಿ ಸಂಸ್ಥೆ ಪಿಟಿಐ ಇಂದು ಬಿಡುಗಡೆ ಮಾಡಿದ್ದು, ಕೆಂಪು ಕೋಟೆಯ ಕೋಟೆಯ ಮೇಲೆ ನೌಕರರು ಬುಲೆಟ್ ಪ್ರೂಫ್ ಬಾಕ್ಸ್‌ ತಯಾರು ಮಾಡುತ್ತಿರುವುದನ್ನ ಕಾಣಬಹುದಾಗಿದೆ. ಹೀಗಾಗಿ ಪ್ರಧಾನಿ ಮೋದಿ ಈ ಬಾರಿ ಬುಲೆಟ್ ಪ್ರೂಫ್ ಬಾಕ್ಸ್ ನಲ್ಲಿ ಭಾಷಣ ಮಾಡುತ್ತಾರೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.


ಇದನ್ನೂ ಓದಿ : ಭಾರತದಲ್ಲಿ ಮತ್ತೆ ಆತಂಕ ಹೆಚ್ಚಿಸಿದ ಓಮಿಕ್ರಾನ್‌ನ ಹೊಸ ರೂಪಾಂತರ


ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು, ಪ್ರಧಾನಿ ಮೋದಿ 2014 ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬುಲೆಟ್ ಪ್ರೂಫ್ ಬಾಕ್ಸ್‌ನಲ್ಲಿ ನಿಂತು ಯಾವತ್ತೂ ಭಾಷಣ ಮಾಡಿಲ್ಲ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ಎಲ್ಲಾ ಪ್ರಧಾನಿಗಳು ಬುಲೆಟ್ ಪ್ರೂಫ್ ಬಾಕ್ಸ್‌ಗಳಲ್ಲಿ ಭಾಷಣ ಮಾಡುತ್ತಿದ್ದರು. ಅದೊಂದು ಸಂಪ್ರದಾಯವಾಗಿಬಿಟ್ಟಿತ್ತು. 1985ರಲ್ಲಿ ಮೊದಲ ಬಾರಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬುಲೆಟ್ ಪ್ರೂಫ್ ಬಾಕ್ಸ್ ನಲ್ಲಿ ನಿಂತು ಭಾಷಣ ಮಾಡಿದರು. 1990ರಲ್ಲಿ ಅಂದಿನ ಪ್ರಧಾನಿ ವಿಪಿ ಸಿಂಗ್ ಹಾಫ್ ಬಾಕ್ಸ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಮತ್ತೆ ಪಿ.ವಿ.ನರಸಿಂಹರಾವ್ ಅವರಿಗೆ ಫುಲ್ ಬಾಕ್ಸ್ ಆಯ್ಕೆ ಮುಂದುವರೆಯಿತು.


ಈ ಬಾರಿಯ ಭದ್ರತಾ ಸಿದ್ಧತೆಗಳು ಹೀಗಿವೆ


75 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಕೆಂಪು ಕೋಟೆಯ ಭದ್ರತೆಗೆ 10000 ಪೊಲೀಸ್ ಸಿಬ್ಬಂದಿಯ ವಹಿಸಲಾಗಿದೆ. ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ : Independence Day 2022: ನಾಳೆ ಕೆಂಪು ಕೋಟೆ ಮೂಲಕ ಪ್ರಧಾನಿ ಮೋದಿಯಿಂದ ಈ ಮಹತ್ವದ ಘೋಷಣೆಗಳ ಸಾಧ್ಯತೆ, ದೇಶದ ನಾಗರಿಕರಿಗೆ ನೇರ ಲಾಭ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.