ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಈ ರಾಜ್ಯಕ್ಕೆ ಸಿಕ್ಕಿರಲಿಲ್ಲ ‘ಸ್ವತಂತ್ರ್ಯ’! ಯಾವ ರಾಜ್ಯ ಗೊತ್ತಾ?
Goa Freedom Struggle: ಬ್ರಿಟಿಷರು 1600ರಲ್ಲಿ ಭಾರತಕ್ಕೆ ಕಾಲಿಡುವ ಮೊದಲೇ ಗೋವಾ 1510ರಿಂದ ಪೋರ್ಚುಗೀಸ್ ವಸಾಹತು ಆಗಿತ್ತು. 1947 ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ, ಗೋವಾ ಇನ್ನೂ ಪೋರ್ಚುಗೀಸರ ಅಡಿಯಲ್ಲಿತ್ತು, ಅವರು 450 ವರ್ಷಗಳ ಕಾಲ ಗೋವಾ ರಾಜ್ಯವನ್ನು ಆಳಿದ್ದರು.
Goa Freedom Struggle: ಆಗಸ್ಟ್ 15, 1947ರ ಮಧ್ಯರಾತ್ರಿ ದೇಶದ ಈ ರಾಜ್ಯ ಒಂದನ್ನು ಹೊರತುಪಡಿಸಿ ಎಲ್ಲಾ ಭಾರತೀಯ ಪ್ರದೇಶಗಳು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಿತು. ಇಡೀ ದೇಶವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ಗೋವಾ ರಾಜ್ಯ ಮಾತ್ರ ಇಲ್ಲಿಯವರೆಗೆ ಇತರ ರಾಜ್ಯಗಳಂತೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದಿಲ್ಲ.
ಇದನ್ನೂ ಓದಿ: 21 ವರ್ಷಗಳ ಬಳಿಕ ಈ ರಾಶಿಗೆ ಒಲಿದ ತುಂಬಿ ಹರಿಯುವಷ್ಟು ಸಂಪತ್ತು: ಕಾಲಿಟ್ಟಲ್ಲೆಲಾ ಯಶಸ್ಸು, ಕೈಬಿಡದೆ ಕಾಯುವ ಬೃಹಸ್ಪತಿ
ಬ್ರಿಟಿಷರು 1600ರಲ್ಲಿ ಭಾರತಕ್ಕೆ ಕಾಲಿಡುವ ಮೊದಲೇ ಗೋವಾ 1510ರಿಂದ ಪೋರ್ಚುಗೀಸ್ ವಸಾಹತು ಆಗಿತ್ತು. 1947 ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ, ಗೋವಾ ಇನ್ನೂ ಪೋರ್ಚುಗೀಸರ ಅಡಿಯಲ್ಲಿತ್ತು, ಅವರು 450 ವರ್ಷಗಳ ಕಾಲ ಗೋವಾ ರಾಜ್ಯವನ್ನು ಆಳಿದ್ದರು.
ಪೋರ್ಚುಗೀಸರ ದಬ್ಬಾಳಿಕೆಗೆ ಅನೇಕ ವರ್ಷಗಳ ಕಾಲ ಗೋವಾದ ಜನರು ಮರುಗಿ ಹೋಗಿದ್ದರು. ದೇವಾಲಯಗಳ ನಾಶ, ಹಿಂದೂಗಳ ಮೇಲೆ ಕಿರುಕುಳ ಮತ್ತು ಬಲವಂತದ ಮತಾಂತರಗಳು, ಕೊಂಕಣಿ ಮೇಲಿನ ನಿಷೇಧ ಮತ್ತು ಹಿಂದೂ ವಿವಾಹ ಪದ್ಧತಿಗಳ ನಿಷೇಧದಂತಹ ಅನೇಕ ದೌರ್ಜನ್ಯಕರ ಘಟನೆಗಳು ಸಂಭವಿಸಿದವು. ಆದರೆ ಅದರ ವಿರುದ್ಧ ದಂಗೆಗಳು ನಡೆಯುತ್ತಿದ್ದರೂ ಸಹ 1940 ರ ವೇಳೆಗೆ ಪ್ರಬಲ ರೂಪ ಪಡೆದುಕೊಂಡಿತ್ತು.
ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಮಹತ್ವದ ನಿರ್ಧಾರ:
ಹಲವಾರು ವಿಫಲ ಮಾತುಕತೆಗಳ ನಂತರ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಗೋವಾವನ್ನು ಭಾರತದ ಉಳಿದ ಭಾಗಗಳೊಂದಿಗೆ ಒಂದುಗೂಡಿಸಲು ಮಿಲಿಟರಿ ಹಸ್ತಕ್ಷೇಪ ಅಗತ್ಯ ಎಂದು ನಿರ್ಧರಿಸಿದರು. ಡಿಸೆಂಬರ್ 18, 1961 ರಂದು, ಪೋರ್ಚುಗೀಸರ ಮೇಲೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು 'ಆಪರೇಷನ್ ವಿಜಯ್' ಎಂದು ಕರೆಯಲ್ಪಡುವ ಸಶಸ್ತ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಡಿಸೆಂಬರ್ 19, 1961 ರಂದು ಬೆಳಿಗ್ಗೆ ಸೆಕ್ರೆಟರಿಯೇಟ್ ಮುಂದೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಇದು ಗೋವಾದಲ್ಲಿ ಪೋರ್ಚುಗೀಸ್ ಆಕ್ರಮಣವನ್ನು ಕೊನೆಗೊಳಿಸಿತು.
ಅಗುಡಾ ಕೋಟೆ:
ಪೋರ್ಚುಗೀಸರು 400 ವರ್ಷಗಳಷ್ಟು ಹಳೆಯದಾದ ಫೋರ್ಟ್ ಅಗುಡಾವನ್ನು, ರಾಜ್ಯದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಗೋವಾದ ಸ್ವಾತಂತ್ರ್ಯ ಹೋರಾಟಗಾರರ ಸೆರೆಮನೆಯಾಗಿ ಪರಿವರ್ತಿಸಿದರು.
ಗೋವಾದಲ್ಲಿ ಪೋರ್ಚುಗೀಸ್ ಪ್ರಭಾವದ ಅತಿದೊಡ್ಡ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಸ್ಥಳಗಳಲ್ಲಿ ಒಂದಾದ ಫೋರ್ಟ್ ಅಗುಡಾ ಜೈಲು 1612 ರಲ್ಲಿ ನಿರ್ಮಿಸಲಾಯಿತು. ಅರೇಬಿಯನ್ ಸಮುದ್ರದ ಮೇಲಿರುವ ಈ ಜೈಲನ್ನು ಆಕ್ರಮಣಕಾರರು ಎಂದಿಗೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿತ್ತು., ಏಕೆಂದರೆ ಈ ಗೋಡೆಗಳು 5 ಮೀಟರ್ ಎತ್ತರವಿದೆ.
ಗೋವಾ ಪ್ರವಾಸೋದ್ಯಮ ಸಚಿವಾಲಯವು ಈಗ ಈ ಜೈಲನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದೆ, ಇದು ಗೋವಾದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಸತತ 9 ವರ್ಷ, 737 ನಿಮಿಷ ಭಾಷಣ.. ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಮಾಡಿದ ಘೋಷಣೆಗಳೇನು?
ವಿಜಯ್ ಕಾರ್ಯಾಚರಣೆಯ ಸಮಯದಲ್ಲಿ ಭಾರತವು ಏಳು ಯುವ ಧೀರ ನಾವಿಕರು ಮತ್ತು ಇತರ ಸಿಬ್ಬಂದಿಯನ್ನು ಕಳೆದುಕೊಂಡಿತು. ಅವರ ನೆನಪಿಗಾಗಿ ಡಿಸೆಂಬರ್ 19ನ್ನು ಗೋವಾ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ