ನವದೆಹಲಿ: ಸ್ವತಂತ್ರ ಭಾರತದ ಮೊದಲ ಭಯೋತ್ಪಾಧಕ ಹಿಂದೂ, ಆತನ ಹೆಸರು ನಾಥುರಾಮ್ ಗೋಡ್ಸೆ ಎಂದು ಮಕ್ಕಳ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅರಾವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ""ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ. ಅವನ ಹೆಸರು ನಾಥೂರಾಮ್ ಗೋಡ್ಸೆ. "ನಾನು ಈ ಮಾತನ್ನು ಇಲ್ಲಿ ಮುಸ್ಲಿಂರು ಅಧಿಕ ಸಂಖ್ಯೆಯಲ್ಲಿ ಇರುವ ಕಾರಣಕ್ಕೆ ಹೇಳುತ್ತಿಲ್ಲ, ನಾನು ಇದನ್ನು ಗಾಂಧಿ ಪ್ರತಿಮೆ ಮುಂದೆ ಹೇಳುತ್ತಿದ್ದೇನೆ, ಆ ರೀತಿ ಇಂದು ನಾನು ಆ ಹತ್ಯೆಯನ್ನು ಖಂಡಿಸುತ್ತಿದ್ದೇನೆ" ಎಂದು ನಟ ರಾಜಕಾರಣಿ ಕಮಲ್ ಹಾಸನ್ ಹೇಳಿದರು.  



ಇದೇ ವೇಳೆ ವೈವಿಧ್ಯಮಯ ಮತ್ತು ಸಮ ಭಾರತದ ಆಶಯವನ್ನು ವ್ಯಕ್ತಪಡಿಸಿದ ಅವರು "ಎಲ್ಲ ಭಾರತೀಯರ ನಿಜವಾದ ಆಶಯವೆಂದರೆ ನಮ್ಮ ಧ್ವಜದ ಎಲ್ಲಾ ಮೂರು ಬಣ್ಣಗಳು ಅಸ್ತಿತ್ವಗಳು ಕೂಡಿ ಇರುವುದು ಮತ್ತು ಅವು ಹಾಗೆಯೇ ಇರುತ್ತವೆ.ನಾನು ಉತ್ತಮ ಭಾರತೀಯ ಇದನ್ನು ನಾನು ಎದೆಯನ್ನು ತಟ್ಟಿಕೊಂಡು ಹೇಳುತ್ತೇನೆ ಎಂದು ಕಮಲ್ ಹಾಸನ್ ಹೇಳಿದರು. 2017 ರ ನವೆಂಬರ್ನಲ್ಲಿ, ಹಿಂದೂ ಉಗ್ರಗಾಮಿತ್ವ" ದ ಬಗ್ಗೆ ಮಾತನಾಡುತ್ತಾ ಹಾಸನ್, ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಕಿಡಿ ಕಾರಿದ್ದರು.