ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಕುಸಿತ
ಕೈಗಾರಿಕಾ ಉತ್ಪಾದನೆ ಐಐಪಿ ಸೂಚ್ಯಂಕದ ಅಂದಾಜಿನ ಪ್ರಕಾರ ಜುಲೈನಲ್ಲಿನ ಶೇಕಡಾ 4.3 ರ ವಿಸ್ತರಣೆಗೆ ಹೋಲಿಸಿದರೆ ಅಗಸ್ಟ್ ನಲ್ಲಿ ಶೇ 1.1 ರಷ್ಟು ಕುಗ್ಗಿದೆ ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.
ನವದೆಹಲಿ: ಕೈಗಾರಿಕಾ ಉತ್ಪಾದನೆ ಐಐಪಿ ಸೂಚ್ಯಂಕದ ಅಂದಾಜಿನ ಪ್ರಕಾರ ಜುಲೈನಲ್ಲಿನ ಶೇಕಡಾ 4.3 ರ ವಿಸ್ತರಣೆಗೆ ಹೋಲಿಸಿದರೆ ಅಗಸ್ಟ್ ನಲ್ಲಿ ಶೇ 1.1 ರಷ್ಟು ಕುಗ್ಗಿದೆ ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.
ವಿಶ್ಲೇಷಕರ ಸಮೀಕ್ಷೆ ಈ ತಿಂಗಳ ಕೈಗಾರಿಕಾ ಉತ್ಪಾದನೆಯು ಶೇಕಡಾ1.8 ರಷ್ಟು ಏರಿಕೆಯಾಗಲಿದೆ ಎಂದು ಊಹಿಸಿದ್ದಾರೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಏಪ್ರಿಲ್-ಆಗಸ್ಟ್ ನಲ್ಲಿನ ಸಂಚಿತ ಬೆಳವಣಿಗೆ ಶೇಕಡಾ 2.4 ರಷ್ಟಿತ್ತು ಎನ್ನಲಾಗಿದೆ.
'ಉತ್ಪಾದನಾ ಕ್ಷೇತ್ರದ 23 ಉದ್ಯಮ ಗುಂಪುಗಳಲ್ಲಿ ಹದಿನೈದು 2019 ರ ಆಗಸ್ಟ್ ತಿಂಗಳಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ' ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಉತ್ಪಾದನೆ, ವಿದ್ಯುತ್ ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳ ಕಳಪೆ ಪ್ರದರ್ಶನದ ಕಾರಣದಿಂದ ಕಾರ್ಖಾನೆಯ ಉತ್ಪಾದನೆಯ ಬೆಳವಣಿಗೆ ಆಗಸ್ಟ್‌ನಲ್ಲಿ ಕುಸಿಯಿತು ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಐಐಪಿಗೆ ಶೇಕಡಾ 77 ಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ಉತ್ಪಾದನಾ ವಲಯವು ಆಗಸ್ಟ್ 2019 ರಲ್ಲಿ ಉತ್ಪಾದನೆಯಲ್ಲಿ ಶೇಕಡಾ 1.2 ರಷ್ಟು ಕುಸಿತವನ್ನು ತೋರಿಸಿದೆ, ಕಳೆದ ವರ್ಷದ ಇದೇ ತಿಂಗಳಲ್ಲಿ ಇದು 5.2 ಶೇಕಡಾ ಬೆಳವಣಿಗೆಯನ್ನು ಹೊಂದಿತ್ತು. ವಿದ್ಯುತ್ ಉತ್ಪಾದನೆಯು ಶೇಕಡಾ 0.9 ರಷ್ಟು ಕುಸಿದಿದ್ದು, ಹಿಂದಿನ ವರ್ಷದ ಶೇಕಡಾ 7.6 ರಷ್ಟು ವಿಸ್ತರಣೆಯಾಗಿದೆ. ಗಣಿಗಾರಿಕೆ ಕ್ಷೇತ್ರದ ಬೆಳವಣಿಗೆ ಶೇ 0.1 ರಷ್ಟಿದೆ ಎಂದು ವರದಿ ಹೇಳಿದೆ/