ಚೀನಾದಿಂದ ಕರಾಚಿಗೆ ಕ್ಷಿಪಣಿ ವಸ್ತುಗಳನ್ನು ಸಾಗಿಸುತ್ತಿದ್ದ ಹಡಗು ವಶ
ಹಡಗಿನಲ್ಲಿ 22 ಸದಸ್ಯ ಸಿಬ್ಬಂದಿ ಇದ್ದಾರೆ. ಈ ಹಡಗು ಬಂದರಿನ ಜೆಟ್ಟಿ ಸಂಖ್ಯೆ -15 ರಲ್ಲಿ ನಿಂತಿದೆ.
ಕಾಂಡ್ಲಾ: ಚೀನಾದಿಂದ ಪಾಕಿಸ್ತಾನದ ಕರಾಚಿಗೆ ಹೋಗುತ್ತಿದ್ದ ಹಡಗನ್ನು ಗುಜರಾತ್‌ನ ಕಾಂಡ್ಲಾ ಬಂದರಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಡಗಿನಲ್ಲಿ ಕ್ಷಿಪಣಿಗೆ ಸಂಬಂಧಿಸಿದ ವಸ್ತುಗಳು ಇದ್ದು, ಅದನ್ನು ಬ್ಯಾಲಿಸ್ಟಿಕ್ ಕ್ಷಿಪಣಿಯ ಉಡಾವಣೆಯಲ್ಲಿ ಬಳಸಬಹುದು ಎಂದು ಶಂಕಿಸಲಾಗಿದೆ.
ಹಡಗಿನಲ್ಲಿ 22 ಸದಸ್ಯ ಸಿಬ್ಬಂದಿ ಇದ್ದಾರೆ. ಈ ಹಡಗು ಬಂದರಿನ ಜೆಟ್ಟಿ ಸಂಖ್ಯೆ -15 ರಲ್ಲಿ ನಿಂತಿದೆ. ಹಡಗಿನ ಬಗ್ಗೆ ವಿವಿಧ ತಂಡಗಳು ತನಿಖೆ ನಡೆಸುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ 3 ರಂದು ಹಡಗನ್ನು ನಿಲ್ಲಿಸಲಾಯಿತು. ಈ ಹಡಗಿನಲ್ಲಿ ಹಾಂಗ್ ಕಾಂಗ್ ಧ್ವಜ ಇತ್ತು ಎಂದು ತಿಳಿದುಬಂದಿದೆ.
ಡಿಆರ್‌ಡಿಒ ತಂಡವೂ ಈ ಹಡಗನ್ನು ಪರಿಶೀಲಿಸಿದೆ. ಡಿಆರ್‌ಡಿಒ ಕ್ಷಿಪಣಿ ವಿಜ್ಞಾನಿಗಳ ಎರಡನೇ ತಂಡ ಇಂದು ಹಡಗನ್ನು ಪರಿಶೀಲಿಸಲಿದೆ. ಈ ಹಡಗನ್ನು ಬಂಧಿಸುವ ಬಗ್ಗೆ ರಾಷ್ಟ್ರೀಯ ಭದ್ರತಾ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡಲಾಗಿದೆ.
ಚೀನಾದಿಂದ ಕರಾಚಿಗೆ ಸಾಗುವ ಹಡಗಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ದೊರೆತಿದೆ ಎಂದು ಗುಜರಾತ್ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.