ನವದೆಹಲಿ: ಲಡಾಕ್ ಗಡಿಯ ಬಳಿ ಭಾರತ-ಚೀನಾ ಸೈನಿಕರ ನಡುವಿನ ಸಂಘರ್ಷದ ಬಳಿಕ, ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಕುರಿತು ಕಾಂಫೆಡರೆಶನ್ ಆಫ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಬಹಿರಂಗವಾಗಿ ಮುಂದೆ ಬಂದಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಸಲುವಾಗಿ ಕ್ಯಾಟ್ 'ಭಾರತೀಯ ಸಾಮಾನ್-ಹಮಾರಾ ಅಭಿಯಾನ' ಕ್ಯಾಂಪೇನ್ ಆರಂಭಿಸಿದೆ, ಕ್ಯಾಟ್ ಚೀನಾದಿಂದ ಆಮದಾಗುವ ಸುಮಾರು 3 ಸಾವಿರ ಪ್ರಾಡಕ್ಟ್ ಗಳ ಪಟ್ಟಿ ತಯಾರಿಸಿದೆ. ಇವುಗಳ ಪೈಕಿ ಇಂದು ಕ್ಯಾಟ್ 500 ವಸ್ತುಗಳ ಲಿಸ್ಟ್ ಜಾರಿಗೊಳಿಸಿದೆ. ಈ ವಸ್ತುಗಳ ಆಮದು ನಿಂತು ಹೋದ ಬಳಿಕ ಭಾರತದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಹಾಗೂ ಈ ಎಲ್ಲ ವಸ್ತುಗಳನ್ನು ಈಗಾಗಲೇ ಭಾರತದಲ್ಲಿ  ಮೊದಲಿನಿಂದಲೇ ತಯಾರಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಕ್ಯಾಟ್ ಪ್ರಕಾರ ಡಿಸೆಂಬರ್ 2021 ರವರೆಗೆ ಚೀನಾ ವಸ್ತುಗಳನ್ನು ಭಾರತದ ಮೂಲಕ ಆಮದು ಮಾಡಿಕೊಳ್ಳಲು 13 ಬಿಲಿಯನ್ ಡಾಲರ್ ಅಂದರೆ 1.5 ಲಕ್ಷ ಕೋಟಿ ರೂ. ಉತ್ಪನ್ನಗಳನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಕ್ಯಾಟ್ ಸಿದ್ಧಪಡಿಸಿರುವ ಪಟ್ಟಿಯಲ್ಲಿ ದಿನನಿತ್ಯ ಬಳಕೆಯಾಗುವ ವಸ್ತುಗಳು, ಆಟಿಕೆ ಸಾಮಾನು, ಫರ್ನಿಶಿಂಗ್ ಫಾಬ್ರಿಕ್ಸ್, ತೆಕ್ಷ್ತ್ತೈಲ್, ಗಿಫ್ಟ್ ಐಟಂಗಳು, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್, ಫ್ಯಾಶನ್, ಗಡಿಯಾರಗಳು, ಆಭರಣಗಳು, ಬಟ್ಟೆಗಳು, ಸ್ಟೇಶನರಿ, ಕಿಚನ್ ವಸ್ತುಗಳು, ಲಗೇಜ್, ಹ್ಯಾಂಡ್ ಬ್ಯಾಗ್, ಕಾಸ್ಮೆಟಿಕ್, ಫರ್ನಿಚರ್, ಲೈಟಿಂಗ್ ವಸ್ತುಗಳು, ಆರೋಗ್ಯಕ್ಕೆ ಸಂಬಂಧಿಸಿದ ಪರಿಕರಗಳು, ಪ್ಯಾಕೆಜಿಂಗ್ ಪ್ರಾಡಕ್ಟ್ ಗಳು, ಆಟೋ ಮೊಬೈಲ್ ಪಾರ್ಟ್ ಗಳು, ದೀಪಾವಳಿ ಹಾಗೂ ಹೋಳಿ ಹಬ್ಬದ ಸಾಮಾನುಗಳು, ಕನ್ನಡಕಗಳಂತಹ ವಸ್ತುಗಳು ಶಾಮೀಲಾಗಿವೆ.


ಈ ಕುರಿತು ಮಾತನಾಡಿರುವ ಸಿಎಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭರ್ತಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ಪ್ರಸ್ತುತ ಭಾರತವು ಚೀನಾದಿಂದ ವಾರ್ಷಿಕವಾಗಿ ಸುಮಾರು 5.25 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ನಾವು ಮೊದಲ ಹಂತದಲ್ಲಿ ಸುಮಾರು 3 ಸಾವಿರ ಉತ್ಪನ್ನಗಳನ್ನು ಸೇರಿಸಿದ್ದೇವೆ ಎಂದು ಹೇಳಿದ್ದಾರೆ. ಇದು ಭಾರತವನ್ನು ಚೀನಾದ ಮೇಲೆ ಕಡಿಮೆ ಅವಲಂಬಿತವಾಗಿಸುತ್ತದೆ. ಪ್ರಸ್ತುತ, ತಂತ್ರಜ್ಞಾನವನ್ನು ಹೆಚ್ಚು ಬಳಸುತ್ತಿರುವ ವಸ್ತುಗಳನ್ನು ಬಹಿಷ್ಕಾರದಲ್ಲಿ ಸೇರಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಏಕೆಂದರೆ ಅಂತಹ ತಂತ್ರಜ್ಞಾನ ಭಾರತದ ಬಳಿ ಅಥವಾ ಭಾರತದ ಸ್ನೇಹಿತ ರಾಷ್ಟ್ರದ ಬಳಿ ಬರುವವರೆಗೆ, ನಮ್ಮ ಬಳಿ ಬೇರೆ ಆಯ್ಕೆಗಳಿಲ್ಲ ಎಂದು ಅವರು ಹೇಳಿದ್ದಾರೆ.