ನವದೆಹಲಿ : ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿಷೇಧವನ್ನ ಕೇಂದ್ರ ಸರ್ಕಾರ ಇಂದು ಜೂನ್ 30ರವರೆಗೆ ವಿಸ್ತರಿಸಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ನಿಗದಿತ ಸಾಗರೋತ್ತರ ವಿಮಾನಗಳ ಮೇಲಿನ ನಿಷೇಧವು ಮೇ 31ರಂದು ಮುಕ್ತಾಯಗೊಳ್ಳಬೇಕಿತ್ತು. 


COMMERCIAL BREAK
SCROLL TO CONTINUE READING

ಕೋವಿಡ್(COVID-19) ಸಂಬಂಧಿತ ನಿರ್ಬಂಧಗಳು ಅಂತರರಾಷ್ಟ್ರೀಯ ಎಲ್ಲಾ ಸರಕು ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.


ಇದನ್ನೂ ಓದಿ : Lockdown-Unlock Latest Update: ಮೇ 31 ರಿಂದ ಅನ್ಲಾಕ್ ಆಗಲಿದೆ ರಾಷ್ಟ್ರ ರಾಜಧಾನಿ


ದಿ. 26-06-2020 ರ ಸುತ್ತೋಲೆಯ ಭಾಗಶಃ ಮಾರ್ಪಾಡುಗಳಲ್ಲಿ, ಸಕ್ಷಮ ಪ್ರಾಧಿಕಾರವು ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳಿಗೆ ಸಂಬಂಧಿಸಿದಂತೆ ಮೇಲೆ ಉಲ್ಲೇಖಿಸಿದ ವಿಷಯದ ಮೇಲೆ ಹೊರಡಿಸಲಾದ ಸುತ್ತೋಲೆಯ ಸಿಂಧುತ್ವವನ್ನ ಜೂನ್ 30, 2021ರ 2359 ಗಂಟೆಗಳು 1 ಎಸ್ ಟಿ ವರೆಗೆ ವಿಸ್ತರಿಸಿದೆ' ಎಂದು ಡಿಜಿಸಿಎ(Directorate General of Civil Aviation) ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ : DRDO ಅಭಿವೃದ್ಧಿಪಡಿಸಿರುವ 2 DG Drug ಔಷಧ ಪ್ರತಿ ಪ್ಯಾಕೆಟ್​ಗೆ ₹ 990! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.