ನವದೆಹಲಿ: ಭಾರತದ ವಾಯುಸೇನಾ ಅಧಿಕಾರಿ ಕುಲಭೂಷನ್ ಜಾಧವ್ ಅವರನ್ನು ಭೇಟಿ ಮಾಡಲು ಬಂದಂತಹ ಸಂದರ್ಭದಲ್ಲಿ  ಜಾಧವ್ ಕುಟುಂಬವನ್ನು ಪಾಕಿಸ್ತಾನ ನಡೆಸಿಕೊಂಡ ರೀತಿಯ ಬಗ್ಗೆ ಭಾರತ ಖಾರವಾಗಿ ಪ್ರತಿಕ್ರಿಯಿಸಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನವು ಜಾಧವ್ ಕುಟುಂಬ ಸದಸ್ಯರು ಕುಲದೀಪ್ ಯಾದವ್ ರನ್ನು ಭೇಟಿ ಮಾಡಲು ಅವಕಾಶ ನೀಡಿದ ಸಂದರ್ಭದಲ್ಲಿ ರಾಯಭಾರಿ ಕಛೇರಿಗಳ ನಡುವೆ ಇದ್ದ ಎಲ್ಲ ರೀತಿಯ ನಂಬಿಕಾರ್ಹತೆಯನ್ನು  ಅದು ಕಡೆಗಣಿಸಿದೆ ಎಂದು ಪಾಕಿಸ್ತಾನಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ. 


ಈ ಬಗ್ಗೆ ಪ್ರತಿಕ್ರಯಿಸಿರುವ  ಭಾರತ ವಿದೇಶಾಂಗ ಇಲಾಖೆಯ ವಕ್ತಾರ ರವೀಶ ಕುಮಾರ್ ಮಾತನಾಡುತ್ತಾ ಜಾಧವ್ ಕುಟುಂಬದ ಧಾರ್ಮಿಕ ಮತ್ತು ಸಾಂಸ್ಕೃತಿಕ ನಡಾವಳಿಗಳಗೆ ಪಾಕಿಸ್ತಾನ ಅಗೌರವ ತೋರಿಸಿದೆ ಎಂದು ಕಿಡಿ ಖಾರಿದ್ದಾರೆ. ಜಾಧವ್ ಕುಟುಂಬದ ಭೇಟಿಯ ಮೊದಲು ಎರಡು ರಾಯಭಾರಿ ಕಛೇರಿಗಳ ನಡುವೆ ಸಾಕಷ್ಟು ಹೊಂದಾಣಿಕೆ ಇತ್ತು ಆದರೆ ಪಾಕಿಸ್ತಾನವು ಜಾದವ್ ಕುಟುಂಬ ಭೇಟಿಯ ವೇಳೆಯಲ್ಲಿ ಈ ಎಲ್ಲಾ ಶಿಷ್ಟಾಚಾರವನ್ನು ಮೀರಿದೆ ಎಂದು ಭಾರತವು ಪಾಕಿಸ್ತಾನದ ನಡೆಯನ್ನು ಟೀಕಿಸಿದೆ.


ಕುಟುಂಬ ಸದಸ್ಯರ ಭೇಟಿ ವೇಳೆಯಲ್ಲಿ ಮಾತೃಭಾಷೆ ಮರಾಠಿಯಲ್ಲಿ ಮಾತನಾಡದಂತೆ ನಿರ್ಭಂದವನ್ನು ಹೇರಿತ್ತು, ಅಲ್ಲದೆ ಜಾಧವ್ ಅವರ ತಾಯಿ ಮತ್ತು ಪತ್ನಿಗೆ ಮಂಗಳಸೂತ್ರವನ್ನು ತೆಗೆಯಲು ನಿರ್ದೇಶನ ನೀಡಿದ್ದಲ್ಲದೆ, ಕುಟುಂಬ ಸದಸ್ಯರ ಮಾತುಕತೆಯನ್ನು ಗಾಜಿನ ಕೊಠಡಿಯಲ್ಲಿ ಏರ್ಪಡಿಸಲಾಗಿತ್ತು. ಈ ಎಲ್ಲ ಪಾಕಿಸ್ತಾನದ ವೈಖರಿಗಳಿಗೆ ಭಾರತ ತೀವ್ರವಾಗಿ ಖಂಡಿಸಿದೆ.