RSS Chief Mohan Bhagwat: 'ಉತ್ತಿಷ್ಠ ಭಾರತ' ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಮುಖ್ಯಷ್ಟ ಮೋಹನ್ ಭಾಗವತ್ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಅವರು, "ನಾವು ನೋಡಲು ಭಿನ್ನವಾಗಿರಬಹುದು. ನಾವು ಭಿನ್ನ-ಭಿನ್ನ ಆಹಾರಗಳನ್ನು ಸೇವಿಸಬಹುದು. ಆದರೆ, ನಮ್ಮ ಅಸ್ತಿತ್ವದಲ್ಲಿ ಐಕ್ಯತೆ ಇದೆ. ಮುಂದಕ್ಕೆ ಸಾಗುವುದನ್ನು ಇಡೀ ವಿಶ್ವ ಭಾರತದಿಂದ ಕಲಿಯುವ ಸಾಧ್ಯತೆ ಇದೆ ಮತ್ತು ಪ್ರಪಂಚದಲ್ಲಿ ಉತ್ಕೃಷ್ಟತೆಯ ಬೆಲೆ ಇದೆ" ಎಂದು ಅವರು ಹೇಳಿದ್ದಾರೆ.
 
ವೈವಿಧ್ಯತೆ ನಿರ್ವಹಣೆಗೆ ಸಂಬಂಧಿಸಿದಂತೆ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ವೈವಿಧ್ಯತೆಯನ್ನು ಸಮರ್ಥವಾಗಿ ನಿರ್ವಹಿಸುವ ವಿಚಾರದಲ್ಲಿ ಇಡೀ ಜಗತ್ತು ಭಾರತದತ್ತ ಬೊಟ್ಟು ಮಾಡುತ್ತದೆ. ಈ ವಿಷಯದಲ್ಲಿ  ಜಗತ್ತು ವಿರೋಧಾಭಾಸಗಳಿಂದ ಕೂಡಿದೆ, ಆದರೆ ಭಾರತ ಮಾತ್ರ ಅದನ್ನು ನಿರ್ವಹಿಸಬಲ್ಲದು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಮಹಾ ಕ್ಯಾಬಿನೆಟ್: ದೇವೇಂದ್ರ ಫಡ್ನವೀಸ್ ಗೆ ಗೃಹ ಮತ್ತು ಹಣಕಾಸು ಖಾತೆ


ನೀವು ಭಯಪಡುವುದನ್ನು ನಿಲ್ಲಿಸಿದಾಗ ಮಾತ್ರ ಭಾರತ ಅಖಂಡವಾಗಲಿದೆ
ಈ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು ಭಾರತವನ್ನು ದೊಡ್ಡದಾಗಿಸಿಕೊಳ್ಳಬೇಕಾದರೆ ನಾವು ಭಯಪಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ನಾವು ಭಯಪಡುವುದನ್ನು ನಿಲ್ಲಿಸಿದಾಗ, ಭಾರತವು ಅಖಂದವಗಲಿದೆ. ನಾವು ಖಂಡಿತವಾಗಿಯೂ ಅಹಿಂಸೆಯ ಆರಾಧಕರಾಗಿದ್ದೇವೆ. ಆದರೆ, ನಾವು ದುರ್ಬಲತೆಯ ಆರಾಧಕರಲ್ಲ. ತಮ್ಮ ಮಾತನ್ನು ಮುಂದುವರೆಸಿ ಮಾತನಾಡಿರುವ ಭಾಗವತ್, ಭಾಷೆ, ಉಡುಗೆ ತೊಡುಗೆ, ಸಂಸ್ಕೃತಿಯಲ್ಲಿ ನಮ್ಮ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳಿದ್ದು, ಈ ವಿಷಯಗಳಲ್ಲಿ ಸಿಲುಕಿಕೊಳ್ಳಬಾರದು ಎಂದಿದ್ದಾರೆ. ದೇಶದ ಎಲ್ಲಾ ಭಾಷೆಗಳು ರಾಷ್ಟ್ರಭಾಷೆಗಳು ಮತ್ತು ಎಲ್ಲಾ ಜಾತಿಯ ಜನರು ನಮ್ಮವರು, ಅಂತಹ ಪ್ರೀತಿಯನ್ನು ನಾವು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-15 August : ನಾಳೆ ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ 9ನೇ ಬಾರಿಗೆ ಪಿಎಂ ಮೋದಿ ಭಾಷಣ!  


ಐತಿಹಾಸಿಕ ಘಟನೆಗಳನ್ನು ಸರಿಯಾಗಿ ಪ್ರಸ್ತುತಪಡಿಸಲಾಗಿಲ್ಲ
ಇನ್ನೂ ಅನೇಕ ಐತಿಹಾಸಿಕ ಘಟನೆಗಳನ್ನು ನಮಗೆ ಸರಿಯಾಗಿ ಹೇಳಲಾಗಿಲ್ಲ ಮತ್ತು ನಾವು ಸರಿಯಾಗಿ ಅವುಗಳನ್ನು ಹೇಳಿಕೊಟ್ಟಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಸಂಸ್ಕೃತ ವ್ಯಾಕರಣ ಹುಟ್ಟಿದ ಸ್ಥಳ ಭಾರತ ಅಲ್ಲ. ಆದರೆ, ಈ ಬಗ್ಗೆ ನಾವು ಎಂದಾದರೂ ಪ್ರಶ್ನೆ ಕೇಳಿದ್ದೇವೆಯೇ? ನಾವು ಈಗಾಗಲೇ ನಮ್ಮ ಜ್ಞಾನವನ್ನು ಮರೆತಿದ್ದೇವೆ, ನಂತರ ವಿದೇಶಿ ಆಕ್ರಮಣಕಾರರು ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡರು. ವಿನಾಕಾರಣ ಭೇದ-ಭಾವ ಸೃಷ್ಟಿಸಲು ಜಾತಿ ಮತ್ತು ಮತಭೇಧ ಸೃಷ್ಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.