ಪಾಕ್ ಭಯೋತ್ಪಾದನೆಗೆ `ಸಿಂಧು` ನೀರಿನ ಮೂಲಕ ಉತ್ತರ ಕೊಟ್ಟ ಭಾರತ
ನವದೆಹಲಿ: ಭಾರತ ಈಗ ಪಾಕಿಸ್ತಾನದ ಭಯೋತ್ಪಾದನೆಗೆ ಸಿಂಧು ನೀರಿನ ಸಮರ್ಪಕ ಬಳಕೆಯ ಮೂಲಕ ಉತ್ತರ ನೀಡಲು ಹೊರಟಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಜಲವಿದ್ಯುತ್ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಆ ಮೂಲಕ ಪಾಕಿಸ್ತಾನಕ್ಕೆ ಹೊಸರೀತಿಯ ಪ್ರತಿಕ್ರಿಯೆ ನೀಡಲು ಮುಂದಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಬ್ಯಾಂಡಿಪೋರ್ನಲ್ಲಿನ 330 ಮೆಗಾವ್ಯಾಟ್ ಕಿಶನ್ಗಂಗಾ ಹೈಡೆಲ್ ಪ್ರೊಜೆಕ್ಟ್ ಉದ್ಘಾಟನೆ ಮತ್ತು ಕಿಶ್ತ್ವಾರ್ನಲ್ಲಿ 1,000 ಮೆಗಾವ್ಯಾಟ್ ಪಕುಲ್ ಡುಲ್ ಯೋಜನೆಯ ಸ್ಥಾಪನೆಯ ಮೂಲಕ 1960ರ ಸಿಂಧೂ ನದಿ ನೀರಿನ ಒಪ್ಪಂದವನ್ನು ಪರಿಶೀಲಿಸುವ ಯೋಜನೆಯನ್ನು ಭಾರತ ರೂಪಿಸಿದೆ ಎಂದು ತಿಳಿದುಬಂದಿದೆ.
ಈ ನಿರ್ಧಾರವು ಪ್ರಮುಖವಾಗಿ 2016 ಸೆಪ್ಟೆಂಬರ್ನಲ್ಲಿ ಪಾಕಿಸ್ತಾನದ ನಾಲ್ಕು ಉಗ್ರಗಾಮಿಗಳು ಜಮ್ಮುವಿನ ಊರಿಯಲ್ಲಿ ಭಾರತೀಯ ಸೇನಾ ನೆಲೆಯ ಮೇಲೆ ದಾಳಿ ನಡೆಸಿದಾಗ 18 ಸೈನಿಕರು ಮೃತಪಟ್ಟ ಬಳಿಕ ಸಿಂಧು ನೀರಿನ ಬಳಕೆಯನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು .ಆಗ ಪ್ರಧಾನಿ ನರೇಂದ್ರ ಮೋದಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಹೇಳಿಕೆ ನೀಡಿದ್ದರು