ನವದೆಹಲಿ : ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ದಾಳಿಯ ಬಗ್ಗೆ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

"ಅವರು ಮಾತ್ರ ಗುಂಡು ಹಾರಿಸುತ್ತಿದ್ದಾರೆಯಾ? ನಾವೂ ಕೂಡ ಗುಂಡು ಹಾರಿಸುತ್ತಿದ್ದೇವೆ. ಎರಡೂ ಪಕ್ಷಗಳು ಇದನ್ನು ಮಾಡುತ್ತಿವೆ. ಇದು ಜನರ ನಾಶಕ್ಕೆ ಕಾರಣವಾಗಿದೆ. ಇದು ಯುದ್ಧದ ಪರಿಸ್ಥಿತಿಗೆ ಕಾರಣವಾಗಿದೆ "ಎಂದು ಅಬ್ದುಲ್ಲಾ ಮಂಗಳವಾರ ಹೇಳಿದರು.


ಮುಂದುವರೆದು ಮಾತನಾಡಿರುವ ಅವರು, "ಯಾವುದೇ ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ, ಈ ಸಮಸ್ಯೆಗೆ ಉಭಯ ರಾಷ್ಟ್ರಗಳೊಂದಿಗಿನ ಮಾತುಕತೆಯೇ ಒಂದೇ ಪರಿಹಾರ" ಎಂದು ಅಭಿಪ್ರಾಯ ಪಟ್ಟಿದ್ದಾರೆ. 


ಜಮ್ಮು ಮತ್ತು ಕಾಶ್ಮೀರದಲ್ಲಿನ ಹಲವು ನಾಯಕರ ಜೊತೆಗೆ ಅಬ್ದುಲ್ಲಾ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾಷಣೆ ಮಾತ್ರ ಮುಂದಿದೆ ಎಂದು ಹೇಳಿದ್ದಾರೆ.


ಭಾನುವಾರ, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಪಾಕಿಸ್ತಾನ ನಿಯಂತ್ರಣ ರೇಖೆಯ ಮೇಲೆ (ಎಲ್ಒಸಿ) ನಡೆಸಿದ ದಾಳಿಯಲ್ಲಿ ಕ್ಯಾಪ್ಟನ್ ಕಪಿಲ್ ಕುಂದು ಸೇರಿದಂತೆ ನಾಲ್ವರು ಸೈನಿಕರು ಈ ಘಟನೆಯಲ್ಲಿ ಸಾವನ್ನಪ್ಪಿದ್ದರಲ್ಲದೆ, ಇತರ ನಾಲ್ಕು ಮಂದಿ ಗುಂಡಿನ ಕಾಳಗದಲ್ಲಿ ತೀವ್ರ ಗಾಯಗೊಂಡಿದ್ದರು. 


ಕಳೆದ ವರ್ಷ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಿಕೆ ನಿಡುವ ಮೂಲಕ ಅಬ್ದುಲ್ಲಾ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದರು.