ಇಮ್ರಾನ್ ಖಾನ್ ಗೆಲುವು ಉಭಯ ದೇಶಗಳ ನಡುವೆ ಅಷ್ಟಾಗಿ ಪರಿಣಾಮ ಬೀರದು- ಶಶಿ ತರೂರ್
ಪಾಕಿಸ್ತಾನದಲ್ಲಿ ಬಹುಮತದತ್ತ ಸಾಗಿರುವ ಇಮ್ರಾನ್ ಖಾನ್ ಪಕ್ಷದ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಇದು ಎರಡು ದೇಶಗಳ ನಡುವೆ ಅಷ್ಟಾಗಿ ಪರಿಣಾಮ ಬೀರದು ಎಂದು ತಿಳಿಸಿದರು.
ನವದೆಹಲಿ: ಪಾಕಿಸ್ತಾನದಲ್ಲಿ ಬಹುಮತದತ್ತ ಸಾಗಿರುವ ಇಮ್ರಾನ್ ಖಾನ್ ಪಕ್ಷದ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಇದು ಎರಡು ದೇಶಗಳ ನಡುವೆ ಅಷ್ಟಾಗಿ ಪರಿಣಾಮ ಬೀರದು ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ನಾವು ಇಮ್ರಾನ್ ಖಾನ್ ರ ಎರಡು ಮುಖಗಳನ್ನು ನೋಡಿದ್ದು ಅದರಲ್ಲಿ ಚುನಾವಣೆಯ ಕುರಿತು ಇರುವ ಕಠಿಣ ನಿಲುವು ಮತ್ತು ಲಂಡನ್ ಮತ್ತು ನವದೆಹಲಿಯಲ್ಲಿ ನೋಡಿದಂತೆ ಉದಾರವಾದಿ ನಿಲುವು, ಆದರಿಂದ ಇದು ಭಾರತ ಮತ್ತು ಪಾಕಿಸ್ತಾನ್ ಗಳ ನಡುವೆ ಅಂತಹ ಬದಲಾವಣೆಯ ವಾತಾವರಣವನ್ನು ಉಂಟು ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಇನ್ನು ಮುಂದುವರೆದು " ಇದು ನಿರೀಕ್ಷಿತ ಕಳೆದ ವರ್ಷದಿಂದ ನಾವು ಕೇಳುತಿದ್ದೇವೆ.ಮಿಲಿಟರಿಗೂ ಸಹಿತ ಬದಲಾವಣೆಯಾಗಬೇಕಾಗಿದೆ.ಆದ್ದರಿಂದ ಅವರು ನವಾಜ್ ಶರೀಫ್ ಮತ್ತು ಅವನ ಪಕ್ಷದಿಂದಾಗಿ ನಿರಾಶರಾಗಿದ್ದರು. ಆದ್ದರಿಂದ ಅವರು ಇಮ್ರಾನ್ ಖಾನ್ ರನ್ನು ಸೂಕ್ತ ವ್ಯಕ್ತಿ ಎಂದು ಅವರು ಪರಿಗಣಿಸಿದ್ದಾರೆ ಎಂದು ತರೂರ್ ತಿಳಿಸಿದರು.