ನವದೆಹಲಿ: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆಯ ಮಧ್ಯೆ, ಕೇಂದ್ರದ ಮೋದಿ ಸರ್ಕಾರ ಇನ್ನೂ 47 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದೆ. ಈಗಾಗಲೇ 59 ಚೈನೀಸ್ ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಮಾಹಿತಿಯ ಪ್ರಕಾರ, ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಈ ಹಿಂದೆ ನಿಷೇಧಿಸಲಾದ ಅಪ್ಲಿಕೇಶನ್‌ಗಳ ಕ್ಲೋನಿಂಗ್ ಅಪ್ಲಿಕೇಶನ್‌ಗಳಾಗಿವೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಈ 47 ಆ್ಯಪ್‌ಗಳು ಕೂಡ ದೇಶದ ಡಾಟಾ ಪ್ರೊಟೊಕಾಲ್ ಅನ್ನು ಉಲ್ಲಂಘಿಸುತ್ತಿವೆ ಮತ್ತು ಅವುಗಳ ಮೇಲೆ ಡೇಟಾ ಕಳ್ಳತನದ ಆರೋಪ ಕೂಡ ಎಂದು ಹೇಳಲಾಗುತ್ತಿದೆ. ಈ ಅಪ್ಲಿಕೇಶನ್‌ಗಳು ಬಳಕೆದಾರರ ಖಾಸಗಿ ಮತ್ತು ಗೌಪ್ಯ ಮಾಹಿತಿಯನ್ನು ಬಳಸುತ್ತಿದ್ದವು ಮತ್ತು ಅವು ಗೌಪ್ಯತೆ ಕಾನೂನನ್ನು ಸಹ ಉಲ್ಲಂಘಿಸಿವೆ, ಈ ಕಾರಣದಿಂದಾಗಿ ಕೇಂದ್ರ ಸರ್ಕಾರವು ಅವುಗಳನ್ನು ನಿಷೇಧಿಸಿದೆ.


ಇದಕ್ಕೂ ಮೊದಲು ಜೂನ್ 29 ರಂದು ಭಾರತದಲ್ಲಿ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಲಾಗಿತ್ತು. ನಿಷೇಧಿಸಲಾದ ಅಪ್ಲಿಕೇಶನ್‌ಗಳಲ್ಲಿ ಟಿಕ್ ಟಾಕ್, ಯುಸಿ ಬ್ರೌಸರ್, ಶೇರ್ ಇಟ್ ಇತ್ಯಾದಿಗಳು ಶಾಮೀಲಾಗಿವೆ. ಇವುಗಳಲ್ಲದೆ, ಹಲೋ, ಲೈಕ್, ಕ್ಯಾಮ್ ಸ್ಕ್ಯಾನರ್, ಶೀನ್ ಕ್ವಾಯ್ ಗಳನ್ನೂ ಕೂಡ ನಿಷೇಧಿಸಲಾಗಿದೆ. ಬೈಡೂ ಮ್ಯಾಪ್, ಕೆವೈಇ, ಡಿಯು ಬ್ಯಾಟರಿ ಸ್ಕ್ಯಾನರ್ ಅನ್ನು ಸಹ ನಿಷೇಧಿಸಲಾಗಿದೆ. ಐಟಿ ಕಾಯ್ದೆ 2000 ರ ಅಡಿಯಲ್ಲಿ ಸರ್ಕಾರ ಈ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು.