ನವದೆಹಲಿ: ಹಿಂಸಾತ್ಮಕ ಮುಖಾಮುಖಿ ನಡೆದ ಲಡಾಖ್‌ನ ಸ್ಥಳವಾದ ಗಾಲ್ವಾನ್ ಕಣಿವೆಯ ಮೇಲೆ ಚೀನಾ ಸಾರ್ವಭೌಮತ್ವದ ವಾದವನ್ನು ಭಾರತದ ವಿದೇಶಾಂಗ ಇಲಾಖೆ ಸಾರಾಸಗಟಾಗಿ ತಿರಸ್ಕರಿಸಿದ್ದಷ್ಟೇ ಅಲ್ಲದೆ ಚೀನಾದ ವಾದವನ್ನು ತೀವ್ರವಾಗಿ ಖಂಡಿಸಿತು 


COMMERCIAL BREAK
SCROLL TO CONTINUE READING

ಲೈನ್ ಆಫ್ ಕಂಟ್ರೋಲ್ ಗೆ ಸಂಬಂಧಿಸಿದಂತೆ ಚೀನಾ ಉತ್ಪ್ರೇಕ್ಷಿತ ಮತ್ತು ಒಪ್ಪಲಾಗದ ಹಕ್ಕುಗಳನ್ನು ಮುಂದಿಡಲು ಪ್ರಯತ್ನಿಸಿದೆ ಆದರೆ ಅದು ಸ್ವೀಕಾರ್ಹವಲ್ಲ."ಗಾಲ್ವಾನ್ ಕಣಿವೆ ಪ್ರದೇಶಕ್ಕೆ ಸಂಬಂಧಿಸಿದ ಸ್ಥಾನವು ಐತಿಹಾಸಿಕವಾಗಿ ಸ್ಪಷ್ಟವಾಗಿದೆ.ಅದು ಹಿಂದೆ ಚೀನಾದ ಸ್ವಂತ ಸ್ಥಾನಕ್ಕೆ ಅನುಗುಣವಾಗಿಲ್ಲ" ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. 


ಶುಕ್ರವಾರ, ಚೀನಾ ಗಾಲ್ವಾನ್ ಕಣಿವೆ ತನ್ನ ವಾಸ್ತವಿಕ ನಿಯಂತ್ರಣ ರೇಖೆಯ ಬದಿಯಲ್ಲಿದೆ" ಎಂದು ಹೇಳಿದೆ. ಆದರೆ,ಗಾಲ್ವಾನ್ ಕಣಿವೆ 1962 ರಿಂದ ಚೀನಾದ ನಕ್ಷೆಗಳಲ್ಲಿ ಕಾಣಿಸಿಕೊಂಡಿಲ್ಲ.