ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ COVID-19 ಪ್ರಕರಣಗಳು ಮತ್ತು 123 ಸಾವುಗಳು ವರದಿಯಾಗಿವೆ (Corona cases in India) ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಸಚಿವಾಲಯದ ಪ್ರಕಾರ, ಒಮಿಕ್ರಾನ್ (Omicron) ಸೋಂಕುಗಳ ಸಂಖ್ಯೆ 1,700 ರಷ್ಟಿದೆ. ಇದು 23 ರಾಜ್ಯಗಳಿಗೆ ಹರಡಿದೆ. 510 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಹೆಚ್ಚು ಪೀಡಿತ ರಾಜ್ಯವಾಗಿದ್ದು, 351 ಪ್ರಕರಣಗಳೊಂದಿಗೆ ದೆಹಲಿ ನಂತರದ ಸ್ಥಾನದಲ್ಲಿದೆ.


ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,849 ಜನರು ಚೇತರಿಸಿಕೊಂಡಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 1,45,582 ರಷ್ಟಿದೆ.  


ಒಟ್ಟು ಗುಣಮುಖರಾದವರ ಸಂಖ್ಯೆ 3,42,95,407 ಆಗಿದೆ. ಭಾರತದ ಚೇತರಿಕೆಯ ಪ್ರಮಾಣವು ಪ್ರಸ್ತುತ ಶೇಕಡಾ 98.20 ರಷ್ಟಿದೆ.


ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 23,30,706 ಲಸಿಕೆ ಡೋಸ್‌ಗಳನ್ನು (Corona Vaccine) ಹಾಕಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಯವರೆಗೆ ತಾತ್ಕಾಲಿಕ ವರದಿಗಳ ಪ್ರಕಾರ ಭಾರತದ COVID-19 ವ್ಯಾಕ್ಸಿನೇಷನ್ ಕವರೇಜ್ 145.68 ಕೋಟಿ (1,45,68,89,306) ಮೀರಿದೆ.


ದೇಶದಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ದೇಶದಲ್ಲಿ ಸಾಪ್ತಾಹಿಕ ಧನಾತ್ಮಕತೆಯ ದರವು ಪ್ರಸ್ತುತ 1.68 ಪ್ರತಿಶತ ಮತ್ತು ದೈನಂದಿನ ಧನಾತ್ಮಕತೆಯ ದರವು 3.84 ಪ್ರತಿಶತದಷ್ಟಿದೆ.


ಭಾರತದಲ್ಲಿ ಇದುವರೆಗೆ ಒಟ್ಟು 68.09 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.  


ಇದನ್ನೂ ಓದಿ: Coronavirus: ದೇಶದ ಈ ರಾಜ್ಯದಲ್ಲಿ ಏಕಕಾಲಕ್ಕೆ 84 ವೈದ್ಯರಿಗೆ ಕೊರೊನಾ ಸೋಂಕು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.