ವಿದೇಶಿಗರಿಗೆ ಬೆಣ್ಣೆ, ಸ್ವದೇಶಿಗರಿಗೆ ಸುಣ್ಣ,ಇದು ಭಾರತದ ಪೆಟ್ರೋಲ್ ಡಿಸೈಲ್ ಲೆಕ್ಕ! -ಆರ್ಟಿಐ ನಿಂದ ಬಹಿರಂಗ
ಆರ್ಟಿಐ ಕಾರ್ಯಕರ್ತ ರೋಹಿತ್ ಸಬರವಾಲ್ ಅವರು ಭಾರತ ದೇಶವು ಒಂದು ಲೀಟರ್ ಪೆಟ್ರೋಲ್ ನ್ನು 34 ರೂಪಾಯಿಗಳಿಗೆ 15 ದೇಶಗಳಿಗೆ ಮತ್ತು ಡಿಸೇಲ್ ಗೆ 37 ರೂಪಾಯಿಯಂತೆ 29 ದೇಶಗಳಿಗೆ ಮಾರಲಾಗುತ್ತದೆ ಎನ್ನುವ ಸಂಗತಿ ಮಾಹಿತಿ ಹಕ್ಕಿನ ಮೂಲಕ ಬಹಿರಂಗಪಡಿಸಿದ್ದಾರೆ.
ನವದೆಹಲಿ: ಆರ್ಟಿಐ ಕಾರ್ಯಕರ್ತ ರೋಹಿತ್ ಸಬರವಾಲ್ ಅವರು ಭಾರತ ದೇಶವು ಒಂದು ಲೀಟರ್ ಪೆಟ್ರೋಲ್ ನ್ನು 34 ರೂಪಾಯಿಯಂತೆ 15 ದೇಶಗಳಿಗೆ ಮತ್ತು ಡಿಸೇಲ್ ಗೆ 37 ರೂಪಾಯಿಯಂತೆ 29 ದೇಶಗಳಿಗೆ ಮಾರಲಾಗುತ್ತದೆ ಎನ್ನುವ ಸಂಗತಿ ಮಾಹಿತಿ ಹಕ್ಕಿನ ಮೂಲಕ ಬಹಿರಂಗಪಡಿಸಿದ್ದಾರೆ.ಈ ಬೆಲೆ ದೇಶದ ಗ್ರಾಹಕರಿಗೆ ಮಾರುವ ಬೆಲೆಗಿಂತ ಎರಡು ಪಟ್ಟು ಅಧಿಕವಾಗಿದೆ ಎಂದು ತಿಳಿದುಬಂದಿದೆ.
ಅವರು ಈ ಮಾಹಿತಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮೂಲಕ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಮಾಹಿತಿ ಹಕ್ಕಿ ಅಡಿಯಲ್ಲಿ ಮಾಹಿತಿಯನ್ನು ಕೇಳಿದಾಗ ಮಂಗಳೂರಿನಲ್ಲಿರುವ ಆಯಿಲ್ ರಿಪೈನರಿ ಕಂಪನಿಯು ಎರಡೂವರೆ ತಿಂಗಳ ನಂತರ ಮಾಹಿತಿ ನೀಡಿದೆ. ಇನ್ನೊಂದು ಸಂಗತಿ ಎಂದರೆ ಈ ದರವನ್ನು ನಿಗದಿಪಡಿಸಲು ಯಾವುದೇ ನಿಬಂಧನೆಗಳು ಸಹ ಇಲ್ಲವೆನ್ನಲಾಗಿದೆ.
ದೇಶದಾದ್ಯಂತ ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆಯಾಗಿದ್ದು, ಇದು ನಾಗರಿಕರನ್ನು ಕೆರಳಿಸಿದ್ದು ಮತ್ತು ಭಾರತೀಯ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ರೋಹಿತ್ ಹೇಳಿದ್ದಾರೆ.ಇದಲ್ಲದೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಕಾರಣವೇನು ಎಂದು ಸರ್ಕಾರ ಅಧಿಕಾರಿಗಳಿಗೆ ಪ್ರಶ್ನಿಸಿದಾಗ,ಇದಕ್ಕೆ ಭಾರತ ಸರ್ಕಾರವು ತೆರಿಗೆ ಕಾರಣವನ್ನು ನೀಡಿದೆ.ತೆರಿಗೆಯನ್ನು 125 ರಿಂದ ಶೇ 150ರಷ್ಟು ವಿಧಿಸಲಾಗಿದೆ.
ಇಂದು ವಾಸ್ತವಾಗಿ ತೈಲ ಟ್ಯಾಂಕ್ 900 ರೂ.ತುಂಬಬೇಕಾಗಿದ್ದು ಆದರೆ ಅದು, 2500 ರೂಗೆ ತುಂಬುತ್ತಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ
ಪಂಜಾಬ್ 82.84 69.09
ಹಿಮಾಚಲ 77.53 68.63
ಹರಿಯಾಣ 74.38 66.98
ರಾಜಸ್ಥಾನ 80.9 73.43
ಸರ್ಕಾರದ ವರದಿಗಳ ಪ್ರಕಾರ, ಅಮೆರಿಕ, ಇರಾಕ್, ಇಂಗ್ಲೆಂಡ್, ಇಸ್ರೇಲ್, ಜೋರ್ಡಾನ್, ಆಸ್ಟ್ರೇಲಿಯಾ, ಯುಎಇ, ಸಿಂಗಪೂರ್, ಮತ್ತು ಇನ್ನೂ ಹೆಚ್ಚಿನ ದೇಶಗಳಿಗೆ ಭಾರತ ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ರಫ್ತು ಮಾಡುತ್ತಿದೆ ಎನ್ನಲಾಗಿದೆ.