ಚೀನಾ ಮಿಸೈಲ್ಗಳ ಪಾಲಿನ ಶತ್ರು: ಹೊಸ ತಲೆಮಾರಿನ `ಪ್ರಳಯ್` ಕ್ಷಿಪಣಿ ಮೊದಲ ಪರೀಕ್ಷೆ ಯಶಸ್ವಿ
Pralay missile test: 150 ರಿಂದ 500 ಕಿಮೀ ವ್ಯಾಪ್ತಿಯೊಂದಿಗೆ, `ಪ್ರಳಯ್` (Pralay missile) ಘನ ಪ್ರೊಪೆಲ್ಲೆಂಟ್ ರಾಕೆಟ್ ಮೋಟಾರ್ ಮತ್ತು ಇತರ ಹೊಸ ತಂತ್ರಜ್ಞಾನದೊಂದಿಗೆ ಚಾಲಿತವಾಗಿದೆ.
ನವದೆಹಲಿ: ಸ್ವದೇಶಿ ನಿರ್ಮಿತ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಖಂಡಾಂತರ 'ಪ್ರಳಯ್' ಕ್ಷಿಪಣಿಯನ್ನು (Pralay missile test) ಒಡಿಶಾದ ಬಾಲೇಶ್ವರದಲ್ಲಿರುವ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಇಂದು ಬೆಳಗ್ಗೆ ಪರೀಕ್ಷಾರ್ಥ ಯಶಸ್ವಿ ಉಡಾವಣೆ ಮಾಡಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಂತ ಅತ್ಯಾಧುನಿಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಬಲವನ್ನು ನೀಡಿದೆ.
ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್ ಅಭಿವೃದ್ಧಿಪಡಿಸಿದ ಘನ-ಇಂಧನ, ಯುದ್ಧಭೂಮಿ ಕ್ಷಿಪಣಿಯು ಭಾರತೀಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಪೃಥ್ವಿ ಡಿಫೆನ್ಸ್ ವೆಹಿಕಲ್ ಅನ್ನು ಆಧರಿಸಿದೆ.
ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬೆಳಿಗ್ಗೆ 10.30 ರ ಸುಮಾರಿಗೆ ಉಡಾವಣೆಗೊಂಡ ಕ್ಷಿಪಣಿಯು ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸಿದೆ ಎಂದು ಡಿಆರ್‌ಡಿಒ ಹೇಳಿಕೆಯಲ್ಲಿ ತಿಳಿಸಿದೆ.
Terrorist attack:ಶ್ರೀನಗರದಲ್ಲಿ ನಾಗರಿಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.