ಭಯೋತ್ಪಾಧನೆ ವಿಚಾರವಾಗಿ ಪಾಕ್ ಗೆ ಎಚ್ಚರಿಕೆ ನೀಡಿದ ಭಾರತ
ನವದೆಹಲಿ: ಚೀನಾದಲ್ಲಿ ನಡೆಯುತ್ತಿರುವ ಶಾಂಗೈ ಕೋ-ಆಪರೇಶನ್ ಆರ್ಗನೈಜೆಶನ್ ಸಮಾವೇಶದಲ್ಲಿ ಪರಸ್ಪರ ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನ್ ಅಧ್ಯಕ್ಷ ಮ್ಯಾಮ್ನೂನ್ ಹುಸೇನ್ ಹಸ್ತಲಾಘನ ಮಾಡಿದ ನಂತರ ಭಯೋತ್ಪಾಧನೆ ವಿಚಾರವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಆಫ್ಘಾನಿಸ್ತಾನದ ವಿಷಯವನ್ನು ಸಹ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಎಲ್ಲ ದೇಶಗಳು ಆಫ್ಗಾನಿಸ್ತಾನದ ಘಾನಿ ಯವರು ಶಾಂತಿ ನೆಲೆ ತೆಗೆದುಕೊಂಡಿರುವ ನಿರ್ಧಾರವನ್ನು ಗೌರವಿಸಬೇಕು ಎಂದು ತಿಳಿಸಿದರು.ಅಲ್ಲದೆ ಆಫ್ಹಾನಿಸ್ತಾನ್ ದ ಸಾರ್ವಭೌಮತೆ ರಕ್ಷಣೆಯ ಸಮಸ್ಯೆ ಬರಬಾರದು ಎನ್ನುವುದು ಎಲ್ಲ ಗೋಲ್ ಆಗಬೇಕು ಎಂದು ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನದ ಸಂಬಂಧವು 2016 ರಂದು ಪಾಕ್ ಉಗ್ರಗಾಮಿಗಳು ಕಾಶ್ಮೀರ್ ಭಾಗದ ಉರಿಯಲ್ಲಿ ದಾಳಿ ಮಾಡಿದಾಗಿನಿಂದ ಹಳಸಿದೆ.ಈಗ ಇಂತಹ ಸಂದರ್ಭದಲ್ಲಿ ಭಾರತದ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿಗಳು ಮತ್ತೆ ಮಾತುಕತೆ ನಡೆಸಿರುವುದು ಮಹತ್ವ ಪಡೆದಿದೆ ಎಂದು ಹೇಳಲಾಗಿದೆ.