ನವದೆಹಲಿ: ಮುಂದಿನ ಎರಡು ದಶಕಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಬೆಳೆಯಲಿದೆ ಮತ್ತು ತಲಾ ಆದಾಯವು ದ್ವಿಗುಣಗೊಳ್ಳಲಿದೆ ಎಂದು ಮುಖೇಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರೊಂದಿಗಿನ ಫೈರ್‌ಸೈಡ್ ಚಾಟ್‌ನಲ್ಲಿ, ರಾಷ್ಟ್ರದ ಒಟ್ಟು ಕುಟುಂಬಗಳ ಶೇಕಡಾ 50 ರಷ್ಟಿರುವ ಭಾರತದ ಮಧ್ಯಮ ವರ್ಗವು ವರ್ಷಕ್ಕೆ ಮೂರರಿಂದ ನಾಲ್ಕು ಶೇಕಡಾ ಬೆಳೆಯುತ್ತದೆ ಎಂದು ಹೇಳಿದರು.


Jio 5G: ಜಿಯೋ ಮೂಲಕ ನಾವು ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸುತ್ತೇವೆ- ಮುಖೇಶ್ ಅಂಬಾನಿ


'ಮುಂದಿನ ಎರಡು ದಶಕಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಬೆಳೆಯುತ್ತದೆ ಎಂದು ನಾನು ಧೃಢವಾಗಿ ನಂಬುತ್ತೇನೆ" ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥರಾದ ಅಂಬಾನಿ ಹೇಳಿದರು.


ಅದಕ್ಕಿಂತ ಮುಖ್ಯವಾಗಿ, ಇದು ಡಿಜಿಟಲ್ ಪ್ರಧಾನ ಸಮಾಜವಾಗಿ ಪರಿಣಮಿಸುತ್ತದೆ, ಯುವಕರು ಇದನ್ನು ಚಾಲನೆ ಮಾಡುತ್ತಾರೆ.ಮತ್ತು ನಮ್ಮ ತಲಾ ಆದಾಯವು ತಲಾ 1,800-2,000 ರಿಂದ ತಲಾ 5,000 ಡಾಲರ್ ಗೆ ತಲುಪುತ್ತದೆ "ಎಂದು ಅವರು ಹೇಳಿದರು.


ವಿಶ್ವದ ನಾಲ್ಕನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರಿಸ್ ಮಾಲೀಕ Mukesh Ambani


ಮುಂಬರುವ ದಶಕಗಳಲ್ಲಿ ವೇಗವಾಗಲಿರುವ ಈ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಭಾಗವಾಗಿರಲು ಫೇಸ್‌ಬುಕ್ ಮತ್ತು ವಿಶ್ವದ ಇತರ ಹಲವಾರು ಕಂಪನಿಗಳು ಮತ್ತು ಉದ್ಯಮಿಗಳು ಭಾರತದಲ್ಲಿರಲು ಒಂದು ಸುವರ್ಣಾವಕಾಶವಿದೆ ಎಂದು ಅವರು ಹೇಳಿದರು.