ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್  2047 ರಲ್ಲಿ ದೇಶದಲ್ಲಿ ಮತ್ತೊಂದು ವಿಭಜನೆಯನ್ನು ನಿರೀಕ್ಷಿಸಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.1947 ರಲ್ಲಿ ಧರ್ಮದ ಆಧಾರದ ಮೇಲೆ ಭಾರತವು ವಿಭಜನೆಯನ್ನು ಕಂಡಿದೆ ಮತ್ತು 72 ವರ್ಷಗಳಲ್ಲಿ 33 ಕೋಟಿಗಳಿಂದ 135.7 ಕೋಟಿಗೆ ದೇಶದ ಜನಸಂಖ್ಯೆ ಏರಿಕೆಯಾಗಿದೆ ಎಂದು ಸಚಿವರು ಹೇಳಿದರು.


COMMERCIAL BREAK
SCROLL TO CONTINUE READING

ಯಾವುದೇ ಸಮುದಾಯವನ್ನು ಹೆಸರಿಸದೆ ಪ್ರಸ್ತಾಪಿಸಿದ ಕೇಂದ್ರ ಸಚಿವರು "ವಿಭಜಿತ  ಶಕ್ತಿಗಳ ಜನಸಂಖ್ಯಾ ಸ್ಫೋಟವು ಘೋರವಾಗಿದೆ" ಎಂದು ಹೇಳಿದರು. ಈ ಕುರಿತಾಗಿ ಟ್ವಿಟ್ ಮಾಡಿರುವ ಗಿರಿರಾಜ್ ಸಿಂಗ್ ಮುಂಬರುವ ದಿನಗಳಲ್ಲಿ  ಭಾರತವನ್ನು ಕುರಿತು ಸಹ ಪ್ರಸ್ತಾಪಿಸುವುದು ಕಷ್ಟ ಎಂದು ಸಿಂಗ್ ಹೇಳಿದರು.



 ಭಾರತೀಯ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35 ಎ  ಬಗ್ಗೆ ಹಿಂದಿಯಲ್ಲಿ  ಟ್ವೀಟ್ ಮಾಡಿರುವ ಅವರು. "ಧರ್ಮವನ್ನು ಆಧರಿಸಿ 1947 ರಲ್ಲಿ ದೇಶವನ್ನು ವಿಭಜಿಸಲಾಗಿತ್ತು. ಇದೇ ರೀತಿಯ ಪರಿಸ್ಥಿತಿ 2047 ರಲ್ಲಿ ಸಂಭವಿಸಲಿದೆ. ಅಲ್ಲದೆ 72 ವರ್ಷಗಳಲ್ಲಿ, ಭಾರತದ  ಜನಸಂಖ್ಯೆಯು 33 ಕೋಟಿಗಳಿಂದ 135.7 ಕೋಟಿಗಳಿಗೆ ಏರಿಕೆಯಾಗಿದೆ. ಇದರಿಂದ ವಿಭಜಿತ ಶಕ್ತಿಗಳ ಜನಸಂಖ್ಯೆಯ ಸ್ಫೋಟವು ಘೋರವಾಗಿದೆ. ಪ್ರಸ್ತುತ 35 ಎ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮುಂಬರುವ ದಿನಗಳಲ್ಲಿ ಭಾರತದ ಕುರಿತು ಪ್ರಸ್ತಾಪಿಸುವುದು ಸಹ ಕಷ್ಟವೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.