ನವದೆಹಲಿ: ಪಾಕಿಸ್ತಾನದ ಮೂಲಕ ಐಎಸ್ಐ ಪ್ರಭಾವದಿಂದಾಗಿ ಭಾರತೀಯ ಸೈನಿಕನೊಬ್ಬ ಹನಿಟ್ರ್ಯಾಪ್ ಗೆ ಬಿದ್ದು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ.ಈಗ ಜೈಸಲ್ಮೇರ್ ಟ್ಯಾಂಕ್ ನಲ್ಲಿರುವ ಈ ಸೈನಿಕನನ್ನು ಈಗ ರಾಜಸ್ತಾನದ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಪಿಆರ್ಓ ಕಲೂನಿಯಲ್ ಸಂಬೀತ್ ಘೋಷ್ " ಜೈಸಲ್ಮೇರ್ ನಲ್ಲಿ ಸೈನಿಕನೊಬ್ಬನನ್ನು ರಾಜಸ್ತಾನದ ಪೋಲಿಸರಿಂದ ಬಂಧಿಸಲಾಗಿದೆ.ಈಗ ಆರ್ಮಿ ಈ ವಿಚಾರದಲ್ಲಿನ ತನಿಖೆಗಾಗಿ ಎಲ್ಲ ರೀತಿಯ ಮಾಹಿತಿಯನ್ನು ನೀಡಲು ಸಹಕಾರ ನೀಡುತ್ತದೆ "ಎಂದಿದ್ದಾರೆ.



ಈಗ ಬಂಧಿಸಿರುವ ಸೈನಿಕನನ್ನು ಹರ್ಯಾಣ ಮೂಲದ ಸೋಂಬಿರ್ ಎಂದು ಗುರುತಿಸಲಾಗಿದೆ. ಆರ್ಮಿ ಮೂಲಗಳ ಪ್ರಕಾರ ಅನುಮಾನಾಸ್ಪದ ಐಎಸ್ಐ ಗೂಡಾಚಾರನು  ಫೆಸ್ ಬುಕ್ ನಲ್ಲಿ ನಕಲಿ ಹೆಸರನ್ನು ಬಳಸಿಕೊಂಡು ಸೈನಿಕನೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ತಿಳಿದುಬಂದಿದೆ.ಈ  ಇಬ್ಬರು ಈಗ ನಿರಂತರವಾಗಿ ಸೋಶಿಯಲ್ ಮೀಡಿಯಾದ ಮೂಲಕ ಆರ್ಮಿ ಘಟಕದ ಚಲನವಲನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ ಎನ್ನಲಾಗಿದೆ.


ಈ ಹಿಂದೆ ಇದೆ ಮಾದರಿಯಲ್ಲಿ ಭಾರತೀಯ ವಾಯು ಸೇನೆ ಗ್ರೂಪ್ ಕ್ಯಾಪ್ಟನ್ ಕೂಡ ಏರ್ ಕ್ರಾಪ್ಟ್ ಗಳ ಕಾರ್ಯಾಚರಣೆ ವಿಚಾರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ  ಬಂಧಿಸಲಾಗಿತ್ತು.ಅಲ್ಲದೆ ಬ್ರಹ್ಮೋಸ್ ಉದ್ಯೋಗಿ ಕೂಡ ಈ ವಿಚಾರವಾಗಿ ಸಿಕ್ಕಿ ಬಿದ್ದಿದ್ದನ್ನು ನಾವು ಕಾಣಬಹುದು.