Srinagar Terrorist Attack: ಶ್ರೀನಗರ ಭಯೋತ್ಪಾದನಾ ದಾಳಿಯ ನಂತರ ಭಾರತೀಯ ಸೇನೆಯ ದೊಡ್ಡ ಕಾರ್ಯಾಚರಣೆ, ಪೂಂಚ್‌ನಲ್ಲಿ ಮುಂದುವರೆದ ಎನ್‌ಕೌಂಟರ್
Srinagar Terrorist Attack: ಭದ್ರತಾ ಪಡೆಗಳು ಎಲ್ಲಾ ಕಡೆಯಿಂದ ಭಯೋತ್ಪಾದಕರನ್ನು ಸುತ್ತುವರೆದಿವೆ. ಎರಡೂ ಕಡೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ. ಲಷ್ಕರ್ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ನಿನ್ನೆ ರಾತ್ರಿ ಶ್ರೀನಗರದಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ 3 ಪೊಲೀಸರು ಹುತಾತ್ಮರಾಗಿದ್ದರು.
Srinagar Terrorist Attack: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಪೂಂಚ್‌ನಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳ ಮಹತ್ವದ ಕಾರ್ಯಾಚರಣೆ ನಡೆಯುತ್ತಿದೆ. ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾದ ಓರ್ವ ಭಯೋತ್ಪಾದಕನನ್ನು ಹತ್ಯೆಗೈದಿವೆ. ನಿನ್ನೆ ರಾತ್ರಿ ಶ್ರೀನಗರದಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದರು, ಇದರಲ್ಲಿ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ ಮತ್ತು 11 ಪೊಲೀಸರು ಗಾಯಗೊಂಡಿದ್ದಾರೆ. ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಇನ್ನೋರ್ವ ಪೊಲೀಸ್ ರಮೀಜ್ ಅಹ್ಮದ್ ಇಂದು ಬೆಳಗ್ಗೆ ಹುತಾತ್ಮರಾಗಿದ್ದಾರೆ. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಗುಂಪು ಕಾಶ್ಮೀರ ಟೈಗರ್ಸ್ ಶ್ರೀನಗರದ ಭಯೋತ್ಪಾದನಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಪೂಂಚ್‌ನಲ್ಲಿ ಮುಂದುವರೆದ ಎನ್‌ಕೌಂಟರ್:
ಪೂಂಚ್‌ನ ಸುರನ್‌ಕೋಟೆಯಲ್ಲಿ ಭದ್ರತಾ ಪಡೆಗಳು ಎಲ್ಲಾ ಕಡೆಯಿಂದ ಭಯೋತ್ಪಾದಕರನ್ನು ಸುತ್ತುವರೆದಿವೆ. ಎರಡರಿಂದ ಮೂರು ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದಿವೆ. ಎರಡೂ ಕಡೆಯಿಂದ ಭೀಕರ ಗುಂಡಿನ ಚಕಮಕಿ ನಡೆಯುತ್ತಿದ್ದು, ಈ ಕಾರ್ಯಾಚರಣೆ ವೇಳೆ ಒಬ್ಬ ಲಷ್ಕರ್ (Lashkar-e-Taiba) ಉಗ್ರನನ್ನು ಹತ್ಯೆ ಮಾಡಲಾಗಿದೆ. 16 ರಾಷ್ಟ್ರೀಯ ರೈಫಲ್ಸ್ ಮತ್ತು ಎಸ್‌ಒಜಿ ತಂಡವು ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಈ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ.
ಇದನ್ನೂ ಓದಿ- Omicronನ ಮೂರು ಹೊಸ ಪ್ರಕರಣ ಪತ್ತೆ, ಭಾರತದಲ್ಲಿ ವೇಗವಾಗಿ ಹರಡುತ್ತಿದೆ ಹೊಸ ರೂಪಾಂತರ
ಶ್ರೀನಗರದಲ್ಲಿ ಉಗ್ರರ ಹೇಡಿ ದಾಳಿ:
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮತ್ತೊಮ್ಮೆ ಭಯೋತ್ಪಾದಕರು ಹೇಡಿತನದ (Srinagar Terrorists Attack) ಕೃತ್ಯ ಎಸಗಿರುವುದು ಗಮನಿಸಬೇಕಾದ ಸಂಗತಿ. ಶ್ರೀನಗರದಲ್ಲಿ ಭದ್ರತಾ ಪಡೆಗಳ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 3 ಯೋಧರು ಹುತಾತ್ಮರಾಗಿದ್ದರೆ, 11 ಮಂದಿ ಗಾಯಗೊಂಡಿದ್ದಾರೆ. ಶ್ರೀನಗರದ ಜೆವಾನ್ ಪಂಥಾ ಚೌಕ್ ಪ್ರದೇಶದ ಬಳಿ ಭಯೋತ್ಪಾದಕರು ಪೊಲೀಸ್ ಬಸ್ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ದಾಳಿ ನಡೆದಿದೆ. 25 ಮಂದಿ ಪೊಲೀಸ್ ಸಿಬ್ಬಂದಿ ಕರ್ತವ್ಯ ಮುಗಿಸಿ ವಾಪಸ್ ಹೋಗುತ್ತಿದ್ದಾಗ ಮೂವರು ಉಗ್ರರು ಪೊಲೀಸ್ ಬಸ್ ಮೇಲೆ ಈ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ- PM Narendra Modi: ಪ್ರೋಟೋಕಾಲ್ ಬಿಟ್ಟು ರಾತ್ರಿ ಕಾಶಿ ತಪಾಸಣೆಗೆ ಹೊರಟ ಪ್ರಧಾನಿ, ರೈಲ್ವೆ ನಿಲ್ದಾಣಕ್ಕೂ ಭೇಟಿ
ದಾಳಿ ಬಳಿಕ ಉಗ್ರರು ಪರಾರಿ:
ಮೂರು ಕಡೆಯಿಂದ 2-3 ಭಯೋತ್ಪಾದಕರು ಬಸ್ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರತೀಕಾರವಾಗಿ, ಗುಂಡು ಹಾರಿಸಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು. ಆದರೆ ಎಲ್ಲಾ ಮೂವರು ದಾಳಿಕೋರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಡೀ ಪ್ರದೇಶವನ್ನು ಸುತ್ತುವರಿದು ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ.
ಅದೇ ಸಮಯದಲ್ಲಿ, ಶ್ರೀನಗರದ ರಂಗ್ರೆತ್ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಭಯೋತ್ಪಾದಕರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಎನ್‌ಕೌಂಟರ್ ವೇಳೆ ವಿದೇಶಿ ಭಯೋತ್ಪಾದಕ ಸೇರಿದಂತೆ ಇಬ್ಬರು ಲಷ್ಕರ್ ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.