ನವದೆಹಲಿ: ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ನಿವೃತ್ತ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಇದೇ ಮೊದಲ ಬಾರಿಗೆ ಭಾರತೀಯ ರಾಯಭಾರಿ ಸಂಪರ್ಕಕ್ಕೆ ಅನುಮತಿ ನೀಡಲಾಗಿದ್ದು,  ಭಾರತೀಯ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರನ್ನು ಜಾಧವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಪಾಕಿಸ್ತಾನದ ಜೈಲಿನಲ್ಲಿದ್ದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸರ್ಕಾರ ಕೌನ್ಸುಲರ್ ಪ್ರವೇಶಕ್ಕೆ ಅವಕಾಶ ನೀಡಿತು. ಪಾಕಿಸ್ತಾನದ ಈ ಪ್ರಸ್ತಾಪವನ್ನು ಸೋಮವಾರ ಅಂಗೀಕರಿಸಿದ ನಂತರ, ಭಾರತವು ಭಾರತೀಯ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರನ್ನು ಕುಲಭೂಷಣ್ ಜಾಧವ್ ಭೇಟಿ ಮಾಡಲು ಕಳುಹಿಸಿತು. ಗೌರವ್ ಅಹ್ಲುವಾಲಿಯಾ ಮತ್ತು ಕುಲಭೂಷಣ್ ಜಾಧವ್ ನಡುವೆ ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆದಿದೆ.


ಮೂಲಗಳ ಪ್ರಕಾರ, ಇಬ್ಬರ ನಡುವಿನ ಸಭೆ ಮುಕ್ತಾಯಗೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮಾಹಿತಿ ನೀಡಿದೆ. ಈ ಬಾರಿ ಪಾಕಿಸ್ತಾನವು ಕಾನ್ಸುಲರ್ ಪ್ರವೇಶವನ್ನು ಬೇಷರತ್ತಾಗಿ ನೀಡುವಂತೆ ಹೇಳಿದೆ. ಪಾಕಿಸ್ತಾನ ಇಬ್ಬರನ್ನೂ ಅಪರಿಚಿತ ಸ್ಥಳಕ್ಕೆ ಕರೆದೊಯ್ಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಅಧಿಕಾರಿಗಳೂ ಉಪಸ್ಥಿತರಿದ್ದರು ಎನ್ನಲಾಗಿದೆ.


ಸುಮಾರು 3 ವರ್ಷಗಳಿಂದ ಭಾರತವು ಕುಲಭೂಷಣ್ ಜಾಧವ್‌ಗೆ ಕಾನ್ಸುಲರ್ ಪ್ರವೇಶವನ್ನು ಪಡೆಯಲು ಬಯಸುತ್ತಿದೆ. ಅಂತರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಆದೇಶದಂತೆ ಸಭೆ ಉತ್ತಮ ಮತ್ತು ಪರಿಣಾಮಕಾರಿಯಾಗಲು ಪಾಕಿಸ್ತಾನವು ಕಾನ್ಸುಲರ್ ಪ್ರವೇಶದ ಸಮಯದಲ್ಲಿ ಸರಿಯಾದ ವಾತಾವರಣವನ್ನು ಒದಗಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಮೂಲಗಳು ತಿಳಿಸಿವೆ.


2016 ರ ಮಾರ್ಚ್ 3 ರಂದು ಜಾಧವ್ ಇರಾನ್ ನಿಂದ ಪಾಕಿಸ್ತಾನಕ್ಕೆ ಪ್ರವೇಶಿಸಿದಾಗ ಬಲೂಚಿಸ್ತಾನದಲ್ಲಿ ಅವರನ್ನು ಪಾಕಿಸ್ತಾನ ಭದ್ರತಾ ಪಡೆ ಬಂಧಿಸಲಾಗಿದೆ ಎಂದು ಹೇಳಿದೆ. ಆದರೆ ಕುಲಭೂಷಣ್ ಜಾಧವ್ ಅವರನ್ನು ಇರಾನ್ ನಿಂದ ಕಿಡ್ನಾಪ್ ಮಾಡಲಾಗಿದೆ ಎಂದು ಭಾರತ ವಾದಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ಐಸಿಜೆ ಮೆಟ್ಟಿಲೇರಿತ್ತು.


ಈ ವಿಚಾರಣೆ ನಡೆಸಿದ್ದ ಐಸಿಜೆ 2019ರ ಜುಲೈ 17 ರಂದು ಕುಲಭೂಷಣ್ ಜಾಧವ್‌ಗೆ ವಿಧಿಸಿರುವ ಗಲ್ಲುಶಿಕ್ಷೆ ತೀರ್ಪನ್ನು ಅಮಾನತು ಮಾಡಿತ್ತು. ಅಲ್ಲದೆ, ಕುಲಭೂಷಣ್ ಜಾಧವ್‌ ಅವರನ್ನು ಭೇಟಿ ಮಾಡಲು ಮತ್ತು ಅವರು ಕಾನೂನಾತ್ಮಕ ನೆರವು ಒದಗಿಸಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ನೀಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ  ಆದೇಶ ಹೊರಡಿಸಿತ್ತು.