ಭಾರತೀಯ ಅರ್ಥವ್ಯವಸ್ಥೆಯ ಕುರಿತು ಪ್ರಕಟಗೊಂಡಿದೆ ಒಂದು ಸಂತಸದ ಸುದ್ದಿ..
ದೇಶದ ಚಾಲ್ತಿ ಆರ್ಥಿಕ ಸ್ಥಿತಿಯ ಕುರಿತು ಅಂದಾಜು ವ್ಯಕ್ತಪಡಿಸಿರುವ ಫಿಚ್ ರೇಟಿಂಗ್ಸ್, ಈ ವರ್ಷದಲ್ಲಿ ದೇಶದ ಆರ್ಥಿಕತೆ ಶೇ.5 ರಷ್ಟು ಕುಸಿಯಲಿದೆ ಎಂದು ಹೇಳಿದೆ.
ನವದೆಹಲಿ: ಚಾಲ್ತಿ ಆರ್ಥಿಕ ವರ್ಷದ ಕುಸಿತದ ಬಳಿಕ ದೇಶದ ಆರ್ಥಿಕತೆ ಮುಂದಿನ ಆರ್ಥಿಕ ವರ್ಷದಲ್ಲಿ ಶೇ.9.5 ರಷ್ಟು ವೃದ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ. ರೇಟಿಂಗ್ಸ್ ಏಜೆನ್ಸಿ ಆಗಿರುವ ಫಿಚ್ ರೇಟಿಂಗ್ಸ್, ಬುಧವಾರ ಜಾರಿಗೊಳಿಸಿರುವ ತನ್ನ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.
ಚಾಲ್ತಿ ಇರುವ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.5 ರಷ್ಟು ಕುಸಿಯಲಿದೆ ಎಂದು ಅಂದಾಜಿಸಿದೆ. ಕೊರೊನಾ ವೈರಸ್ ಸಂಕಷ್ಟ ಹೆಚ್ಚಾಗುವ ಮೊದಲೇ ದೇಶದ ಆರ್ಥವ್ಯವಸ್ಥೆಯಲ್ಲಿ ನಿರಸತೆ ಕಂಡುಬಂದಿತ್ತು.
ಫಿಚ್ ರೇಟಿಂಗ್ಸ್ ಬುಧವಾರ ತನ್ನ ಏಷ್ಯಾ-ಪೆಸಿಫಿಕ್ ಸಾಲ ಸಾಲ ಸನ್ನಿವೇಶ ವರದಿಯನ್ನು ಬಿಡುಗಡೆ ಮಾಡಿದೆ. "ಕೋವಿಡ್ -19 ಸಾಂಕ್ರಾಮಿಕವು ದೇಶದ ಬೆಳವಣಿಗೆಯ ಭೂದೃಶ್ಯವನ್ನು ದುರ್ಬಲಗೊಳಿಸಿದೆ" ಎಂದು ಅದು ಹೇಳಿದೆ. ಇದಕ್ಕೆ ಇತರ ಪ್ರಮುಖ ಕಾರಣವೆಂದರೆ ಸರ್ಕಾರದ ಮೇಲಿನ ಭಾರೀ ಸಾಲದಿಂದಾಗಿ, ಅನೇಕ ಸವಾಲುಗಳು ಸಹ ಉದ್ಭವಿಸಿವೆ” ಎಂದು ಹೇಳಿದೆ.
ಈ ಜಾಗತಿಕ ಸಾಂಕ್ರಾಮಿಕ ಬಿಕ್ಕಟ್ಟಿನ ನಂತರ ದೇಶದ ಜಿಡಿಪಿ ಬೆಳವಣಿಗೆಯ ದರವು ಮತ್ತೆ ತನ್ನ ವೇಗ ಕಂಡುಕೊಳ್ಳುವ ನಿರೀಕ್ಷೆಯಿದೆ ಎಂದು ಫಿಚ್ ಹೇಳಿದ್ದು, ಅದು ಪುನಃ ಉನ್ನತ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ಇದು ಮುಂದಿನ ವರ್ಷದಲಿ ಶೇ. 9.5 ರಷ್ಟು ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು 'ಬಿಬಿಬಿ' ಶ್ರೇಣಿಗಿಂತ ಹೆಚ್ಚಾಗಿದೆ ಎಂದು ಫೀಚ್ ಹೇಳಿದೆ.
ಕೊರೊನಾ ವೈರಸ್ ಪಿಡುಗನ್ನು ಹತ್ತಿಕ್ಕಲು ದೇಶಾದ್ಯಂತ ಮಾರ್ಚ್ 25ರಿಂದ ಲಾಕ್ ಡೌನ್ ಜಾರಿಗೆ ಬಂದಿದೆ. ಇದನ್ನು ಹಲವು ಬಾರಿಗೆ ವಿಸ್ತರಿಸಲಾಗಿದ್ದು , ಸದ್ಯದ ಲಾಕ್ ಡೌನ್ ಜೂನ್ 30ಕ್ಕೆ ಅಂತ್ಯವಾಗಲಿದೆ. ಆದರೆ, ಮೇ 4ರ ಬಳಿಕ ಜಾರಿಗೆ ಬಂದ ಲಾಕ್ ಡೌನ್ ನಲ್ಲಿ ಹಲವು ಸಡಿಲಿಕೆಗಳನ್ನೂ ನೀಡಲಾಗಿದೆ. ಆದ್ರೆ, ದೇಶಾದ್ಯಂತ ಸದ್ಯ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ.