ಉಕ್ರೇನ್-ರಷ್ಯಾ ಯುದ್ಧದಿಂದ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ನಿರ್ಮಲಾ ಸೀತಾರಾಮನ್
ಉಕ್ರೇನ್-ರಷ್ಯಾ ಯುದ್ಧದಿಂದ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರು: ಉಕ್ರೇನ್-ರಷ್ಯಾ ಯುದ್ಧದಿಂದ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಆತ್ಮನಿರ್ಭರ ಅರ್ಥವ್ಯವಸ್ಥೆ ಮೇಲಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಕ್ರೇನ್ -ರಷ್ಯಾ ಯುದ್ಧ ಭಾರತದ ಮೇಲೂ ಪರಿಣಾಮ ಬೀರಿದೆ.ಕಚ್ಚಾ ತೈಲಗಳ ದರ ಹೆಚ್ಚಳ ಆಗಿದೆ.ಭಾರತ 80% ಕಚ್ಚಾತೈಲ ಆಮದು ಮಾಡಿಕೊಳ್ತಿದೆ.ತೈಲ ದರವನ್ನು ಪೆಟ್ರೋಲಿಯಂ ಕಂಪೆನಿಗಳು ತೈಲ ದರ ನಿರ್ಧರಿಸಲಿವೆ.ಹಾಗಾಗಿ ಈಗ ಪರ್ಯಾಯ ಮೂಲಗಳಿಂದ ತೈಲ ಆಮದು ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ಬಜೆಟ್ ನಲ್ಲಿ ತೈಲ ಬೆಲೆಯ ಏರುಪೇರು ತಡೆಯಲು ಕೆಲ ಅಂಶಗಳನ್ನು ಸೇರಿಸಲಾಗಿದೆ.ಆದರೆ ಈಗ ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.ಈ ಬಗ್ಗೆ ನಾವು ಗಮನ ಹರಿಸಿದ್ದೇವೆ.ಯುದ್ಧದ ವ್ಯತಿರಿಕ್ತ ಪರಿಣಾಮ ಖಂಡಿತವಾಗಿಯೂ ಆಗಲಿದೆ.ಇದು ಎಲ್ಲಾ ದೇಶಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಲೆ ಏರಿಕೆಗೆ ಕೇಂದ್ರ ವಿತ್ತ ಸಚಿವರೇ ಹೊಣೆ.. ಸರ್ಕಾರಕ್ಕೆ ಅರ್ಥಶಾಸ್ತ್ರ ಅರ್ಥವಾಗುತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ
ಈ ಸಂದರ್ಭದಲ್ಲಿ ರಷ್ಯಾ-ಉಕ್ರೇನ್ ಯುದ್ಧ ಹಲವು ಸವಾಲುಗಳನ್ನೊಡ್ಡಿದೆ.ಯುದ್ಧದಿಂದಾಗಿ ರಷ್ಯಾದಿಂದ ಗೋಧಿ ಪೂರೈಕೆ ಆಗ್ತಿಲ್ಲ.ಭಾರತದ ರೈತರೇ ಸಾಕಷ್ಟು ಗೋಧಿ ಉತ್ಪಾದಿಸ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾವು ಜಾಗತಿಕ ದೃಷ್ಟಿಕೋನದಿಂದ ಈ ಸವಾಲನ್ನು ಸ್ವೀಕರಿಸಬೇಕಿದೆ.ಆ ಮೂಲಕ ನಾವು ಜಗತ್ತಿಗೆ ಗೋದಿ ಪೂರೈಸುವಲ್ಲೂ ಸಹ ಆತ್ಮ ನಿರ್ಭರತೆಯನ್ನು ಸಾಧಿಸುತ್ತೇವೆ.ಇನ್ನೊಂದೆಡೆಗೆ ಭಾರತದಲ್ಲಿ ಮಾತ್ರ ಕೋವಿನ್ ಆಪ್ ಮೂಲಕ ಲಸಿಕೆ ಬಗ್ಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಈ ವ್ಯವಸ್ಥೆ ಬೇರೆ ದೇಶಗಳಲ್ಲಿಲ್ಲ ಎಂದು ತಿಳಿಸಿದರು.
ಗುಜರಾತ್ ಮಾಡೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್ (Nirmala Sitharaman), ಗುಜರಾತ್ ನಲ್ಲಿ ಮೋದಿಯವರು ಸಿಎಂ ಆಗಿದ್ದಾಗ 8 ಕೋಟಿ ಮಹಿಳೆಯರಿಗೆ ಸಿಲಿಂಡರ್ ಹಂಚುವ ಘೋಷಣೆ ಮಾಡಿದ್ರು. ಅದರಂತೆ ಅವರು 8 ಕೋಟಿ ಮಹಿಳೆಯರಿಗೆ ಉಚಿತ ಅನಿಲ್ ಸಿಲಿಂಡರ್ ಕೊಟ್ರು.ಪ್ರತೀ ಮನೆಗೂ ವಿದ್ಯುತ್, ನೀರು ಪೂರೈಕೆ ಮಾಡಲಾಯಿತು.ಇವೆಲ್ಲ ಅಲ್ಲಿ ಇವತ್ತೂ ಹಾಗೆಯೇ ಮುಂದುವರೆದಿವೆ.ಇವನ್ನೆಲ್ಲ ಸುಳ್ಳು ಅಂತ ತೋರಿಸಲು ಕೆಲವರು ಪ್ರಯತ್ನ ಪಟ್ರು. ಆ ಪ್ರಯತ್ನದಲ್ಲಿ ಅವರು ಸೋತಿದ್ದಾರೆ ಎಂದು ಅವರು ಹೇಳಿದರು.
ಕಟ್ಟಕಡೆಯ ವ್ಯಕ್ತಿಗೆ ತಲುಪುವ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಪ್ರಧಾನಿ ಮೋದಿ ನೀಡಿದ್ದಾರೆ.ಭ್ರಷ್ಟಾಚಾರದಿಂದ ದೇಶದ ಜನರು ರೋಸಿ ಹೋಗಿದ್ದರು.ಆದರೆ ಪ್ರಧಾನಿ ಮೋದಿ ಆಡಳಿತ ಅದನ್ನು ತೊಡೆದು ಹಾಕಿದೆ.ಕೊರೋನಾ (Coronavirus) ಸಂದರ್ಭವನ್ನು ಸಮರ್ಥವಾಗಿ ದೇಶ ಎದುರಿಸಿದೆ.ಕೋವಿಡ್ ವೇಳೆ ಆತ್ಮನಿರ್ಭರತಾ ಭಾರತವನ್ನು ಸೃಷ್ಟಿಸಲಾಗಿತ್ತು. ಆತ್ಮನಿರ್ಭರತೆಯಿಂದ ಕೋವಿಡ್ ತುರ್ತುಸ್ಥಿತಿ ನಿರ್ವಹಣೆ ಮಾಡಿದ್ದೇವೆ. ಆರು ತಿಂಗಳೊಳಗೆ 5 ಲಕ್ಷ ಪಿಪಿಇ ಕಿಟ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದರ ಬಳಿಕ ಪಿಪಿಇ ಕಿಟ್ ಆಮದು ಸ್ಥಗಿತ ಮಾಡಲಾಯಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಇದನ್ನೂ ಓದಿ: 'ಜಾಗತಿಕ ಬೆಳವಣಿಗೆಗಳಿಂದ ಉಂಟಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧ'
ಆಮದು ಮೇಲಿನ ಸುಂಕ ಹೆಚ್ಚಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ತಯಾರಾಗುವ ವಸ್ತುಗಳನ್ನು ಇಲ್ಲಿಯವರು ಖರೀದಿಸಬೇಕು.ನಮ್ಮ ವಸ್ತುಗಳ ಖರೀದಿಸದೇ ವಿದೇಶಗಳ ಮೇಲೆ ಹಲವರು ಅವಲಂಬಿತರಾಗಿದ್ದಾರೆ. ಹಾಗಾಗಿ ಆಮದು ಮೇಲೆ ಸುಂಕ ಹೆಚ್ಚಿಸಲಾಯಿತು.ಇಲ್ಲೇ ತಯಾರಾಗ್ತಿರುವ ಉತ್ಪನ್ನಗಳ ಮೇಲೆ ಸುಂಕ ಕಮ್ಮಿ ಮಾಡಿದ್ದೇವೆ ಎಂದರು.
'ನಾವು ಯಾವ ರಾಜ್ಯಗಳ ಮಧ್ಯೆಯೂ ತಾರತಮ್ಯ ಮಾಡಿಲ್ಲ. ಅನುದಾನ ಹಂಚಿಕೆಯಲ್ಲಿ ಯಾವುದೇ ರೀತಿಯ ಪಕ್ಷಪಾತ ಮಾಡಿಲ್ಲ. ಸಮರ್ಪಕ ಅನುದಾನ ಸಕಾಲಿಕವಾಗಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.