ನವದೆಹಲಿ :ಭಾರತೀಯ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು (ಇವಿಎಂಗಳು) ಜಗತ್ತಿನಲ್ಲಿಯೇ ಅತಿ ವಿಶಿಷ್ಟವಾದವುಗಳು ಎಂದು ಚುನಾವಣಾ ಆಯೋಗ ಮುಖ್ಯಸ್ಥ  ಓಂ ಪ್ರಕಾಶ್ ರಾವತ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಎಎನ್ಐಗೆ ಪ್ರತಿಕ್ರಯಿಸಿರುವ ಚುನಾವಣಾ ಆಯುಕ್ತರು "ನಮ್ಮ EVMಗಳು ವಿಶಿಷ್ಟವಾಗಿದೆ,ಇವು  ಹೊರಗಿನ ಜಗತ್ತಿಗೆ ಯಾವುದೇ ಸಂಪರ್ಕ,ಅಥವಾ ಸಹಾಯಕ ಸರ್ಕ್ಯೂಟ್ ಗಳನ್ನೂ ಹೊಂದಿಲ್ಲ ಮತ್ತು ವೈರ್ಲೆಸ್ನಲ್ಲಿ ಇತರ ಯಂತ್ರಗಳಿಗೆ ಸಂಪರ್ಕಿಸುವ ಸಾಮರ್ಥ್ಯವು ಇಲ್ಲ, ಈ ರೀತಿಯ ಇವಿಎಂಗಳನ್ನು ಜಗತ್ತಿನ ಬೇರೆ ಯಾವುದೇ ಭಾಗದಲ್ಲಿ ಬಳಸಿಲ್ಲ,ಇದು ನಮ್ಮ ನೂತನ  ಆವಿಷ್ಕಾರ ಎಂದು ಅವರು ತಿಳಿಸಿದರು.


ಇತ್ತೀಚಿಗೆ ಬಹುತೇಕ ಪಕ್ಷಗಳು ಇವಿಎಮ್ ಗಳ ಕುರಿತಾಗಿ ಅಪಸ್ವರ ಎತ್ತಿದ್ದರಿಂದಾಗಿ ಈಗ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿದೆ.