ನವದೆಹಲಿ: ಚೀನಾ ಮೂಲದ ಮೊಬೈಲ್ ಆಪ್ ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ  ಭಾರತ ಸರ್ಕಾರ 59 ಚೀನಾ ಆ್ಯಪ್‌ಗಳನ್ನು ನಿಷೇಧಿಸಿದೆ. ಇದು ಪ್ರಸಿದ್ಧ ಅಪ್ಲಿಕೇಶನ್‌ಗಳಾದ ಟಿಕ್‌ಟಾಕ್ ಮತ್ತು ಪಬ್‌ಜಿ ಗಳನ್ನು ಸಹ ಒಳಗೊಂಡಿದೆ. ಭಾರತ ಮತ್ತು ಚೀನಾ ನಡುವೆ ಇತ್ತೀಚೆಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ, ಭಾರತೀಯ ಸೇನೆಯ 20 ಸೈನಿಕರು ಹುತಾತ್ಮರಾಗಿದ್ದರು. ನಂತರ ದೇಶದಲ್ಲಿ ಚೀನಾ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು, ಚೀನಾ ಮೂಲದ ವಸ್ತುಗಳನ್ನು ಹಾಗೂ ಆಪ್ ಗಳನ್ನು ಬಾಯ್ಕಾಟ್ ಮಾಡಬೇಕು ಎಂಬ ಕೂಗುಗಳು ಕೇಳಿಬರಲಾರಂಭಿಸಿವೆ. ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಈಗಾಗಲೇ  ಜನರು ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇಲ್ಲಿದೆ ನಿಷೇಧಕ್ಕೆ ಒಳಗಾದ 59 ಆಪ್ ಗಳ ಪಟ್ಟಿ
1. TikTok
2. Shareit
3. Kwai
4. UC Browser
5. Baidu map 
6. Shein 
7. Clash of Kings 
8. DU battery saver 
9. Helo 
10. Likee
11. YouCam makeup 
12. Mi Community 
13. CM Browers 
14. Virus Cleaner 
15. APUS Browser 
16. ROMWE 
17. Club Factory 
18. Newsdog 
19. Beutry Plus 
20. WeChat 
21. UC News 
22. QQ Mail 
23. Weibo 
24. Xender 
25. QQ Music 
26. QQ Newsfeed 
27. Bigo Live 
28. SelfieCity 
29. Mail Master 
30. Parallel Space 
31. Mi Video Call – Xiaomi 
32. WeSync 
33. ES File Explorer 
34. Viva Video – QU Video Inc 
35. Meitu 
36. Vigo Video 
37. New Video Status 
38. DU Recorder 
39. Vault- Hide 
40. Cache Cleaner DU App studio 
41. DU Cleaner 
42. DU Browser 
43. Hago Play With New Friends 
44. Cam Scanner 
45. Clean Master – Cheetah Mobile 
46. Wonder Camera 
47. Photo Wonder 
48. QQ Player 
49. We Meet 
50. Sweet Selfie 
51. Baidu Translate 
52. Vmate 
53. QQ International 
54. QQ Security Center 
55. QQ Launcher 
56. U Video 
57. V fly Status Video 
58. Mobile Legends 
59. DU Privacy


ಭಾರತದಲ್ಲಿ, ಚೀನೀ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಸ್ಥಳೀಯ ಅಪ್ಲಿಕೇಶನ್ ಗಳಿಗೆ ಭಾರಿ ಬೇಡಿಕೆ ಕಂಡುಬರಲಾರಂಭಿಸಿದೆ. ಚೈನೀಸ್ನ ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳನ್ನು ಬದಲಾಯಿಸಲು ಸ್ಪಾರ್ಕ್‌ನಂತಹ ಹೊಸ ಅಪ್ಲಿಕೇಶನ್‌ಗಳು ಬಂದಿವೆ. ಚೀನಾದ ಕಿರು ವೀಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ಸೋಲಿಸಲು ರಚಿಸಲಾದ ಮಿತ್ರೋ(ಮಿತ್ರೋನ್) ಅಪ್ಲಿಕೇಶನ್, ಬಿಡುಗಡೆಯಾದ ಕೇವಲ ಎರಡು ತಿಂಗಳಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದಲ್ಲದೆ, ಸ್ಪಾರ್ಕ್ ಅಪ್ಲಿಕೇಶನ್ ಸಹ ಜನರಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಮಿತ್ರೋ ಅಪ್ಲಿಕೇಶನ್ ಅನ್ನು ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಿಂದ ಒಂದು ಕೋಟಿ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿದ್ದಾರೆ. ಚೀನೀ ಸರಕುಗಳನ್ನು ಬಹಿಷ್ಕರಿಸುವ ಮನವಿಯ ನಂತರ ಈ ಅಪ್ಲಿಕೇಶನ್‌ಗಳು ಜನರಲ್ಲಿ ಬಹಳ ಜನಪ್ರಿಯವಾಗಿವೆ.