ನವದೆಹಲಿ: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ಗುರುವಾರ ಕಲ ಟಿವಿಗಳ ಆಮದಿನ ಮೇಲೆ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ. ದೇಶದಲ್ಲಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅನಿವಾರ್ಯವಲ್ಲದ ವಸ್ತುಗಳನ್ನು ಚೀನಾದಂತಹ ದೇಶಗಳಿಂದ ಆಮದನ್ನು ಕಡಿಮೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಅಡಿಸೂಚನೆ ಹೊರಡಿಸಿರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ), "ಬಣ್ಣ ಟಿವಿ ಆಮದು ನೀತಿಯನ್ನು ಮುಕ್ತದಿಂದ ನಿಷೇಧಕ್ಕೆ ಬದಲಾಯಿಸಲಾಗಿದೆ" ಎಂದು ಹೇಳಿದೆ.


ಈ ಆಮದು ನಿಷೇಧವು 36 ಸೆಂಟಿಮೀಟರ್‌ಗಳಿಂದ 105 ಸೆಂಟಿಮೀಟರ್‌ ಗಳ ವರೆಗಿನ ಪರದೆ ಗಾತ್ರದ ಹೊಂದಿರುವ ಬಣ್ಣದ ಟೆಲಿವಿಷನ್ ಸೆಟ್ ಗಳ ಜೊತೆಗೆ 63 ಸೆಂಟಿಮೀಟರ್‌ಗಳಿಗಿಂತ ಕಡಿಮೆ  ಸ್ಕ್ರೀನ್ ಗಾತ್ರ ಹೊಂದಿರುವ ಎಲ್ಸಿಡಿ ಟೆಲಿವಿಷನ್ ಸೆಟ್‌ ಗಳಿಗೆ ಅನ್ವಯಿಸಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.


ಯಾವುದೇ ಸರಕುಗಳನ್ನು ನಿರ್ಬಂಧಿತ ಆಮದು ವಿಭಾಗದಲ್ಲಿ ಇಡುವುದು ಎಂದರೆ, ಆ ಸರಕುಗಳನ್ನು ಆಮದು ಮಾಡಿಕೊಳ್ಳುವವರು ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯದ ಡಿಜಿಎಫ್‌ಟಿಯಿಂದ ಪರವಾನಗಿ ಪಡೆಯಬೇಕಾಗುತ್ತದೆ.


ಭಾರತಕ್ಕೆ ಟಿವಿ ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಚೀನಾ, ವಿಯೆಟ್ನಾಂ, ಮಲೇಷ್ಯಾ, ಹಾಂಗ್ ಕಾಂಗ್, ಕೊರಿಯಾ, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಜರ್ಮನಿ ದೇಶಗಳು ಶಾಮೀಲಾಗಿವೆ.


2019-20ರಲ್ಲಿ ಭಾರತವು 78.1 ಮಿಲಿಯನ್ ಮೌಲ್ಯದ ಬಣ್ಣ ಟಿವಿಗಳನ್ನು ಆಮದು ಮಾಡಿಕೊಂಡಿತ್ತು. ಕಳೆದ ಹಣಕಾಸು ವರ್ಷದಲ್ಲಿ ವಿಯೆಟ್ನಾಂ ಮತ್ತು ಚೀನಾದಿಂದ ಆಮದು ಕ್ರಮವಾಗಿ. 42.8 ಮಿಲಿಯನ್ ಮತ್ತು 3 293 ಮಿಲಿಯನ್ ಗಳಷ್ಟಿತ್ತು.


ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ಯಾನಾಸೋನಿಕ್ ಇಂಡಿಯಾ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯಕಾರಿ ಅಧಿಕಾರಿ ಮನೀಶ್ ಶರ್ಮಾ, ಸರ್ಕಾರದ ಈ ನಿರ್ಣಯದಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಅಸೆಮ್ಬಲ್ದ್ ಟಿವಿ ಸೆಟ್ ಗಳು ಲಭ್ಯವಾಗಲಿವೆ ಎಂದಿದ್ದಾರೆ.