ನವದೆಹಲಿ: ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ. ಹೌದು, ಈ ವರ್ಷದ ಡಿಸೆಂಬರ್ ನಿಂದ ಭಾರತದಿಂದ ಪಾಕಿಸ್ತಾನಕ್ಕೆ ಹೋಗುವ ನದಿಗಳ ನೀರನ್ನು ತಡೆಹಿಡಿಯಲು ಆರಂಭಿಸುವುದಾಗಿ  ಹೇಳಿದೆ. ಈಗಾಗಲೇ ಈ ಕುರಿತು ತಾಂತ್ರಿಕ ವರದಿ ಸಿದ್ಧಗೊಂಡಿದ್ದು, ಕಾನೂನಾತ್ಮಕ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.


COMMERCIAL BREAK
SCROLL TO CONTINUE READING

2019 ರಲ್ಲಿ ನಡೆದ ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಅಷ್ಟೊಂದು ಉತ್ತಮವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಎಕ್ಸ್ಕ್ಲೂಸಿವ್ ವರದಿಯೊಂದು ಪ್ರಕಟಗೊಂಡಿದ್ದು, ವರದಿಯ ಪ್ರಕಾರ ಭಾರತ ಸರ್ಕಾರ ಉಜ್ಜ ನದಿಯ ಸುಮಾರು 2 TMC ನೀರನ್ನು ತಡೆಹಿಡಿಯಲು ಸಿದ್ಧತೆ ನಡೆಸಲಾಗುತ್ತಿದ್ದು, ಈ ನದಿ ರಾವಿ ನದಿಯ ಉಪನದಿಯಾಗಿದೆ.


ಕಳೆದ ವರ್ಷ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸರ್ಕಾರ ಉತ್ತರಾಖಂಡ್ ನಲ್ಲಿ 3 ಆಣೆಕಟ್ಟುಗಳನ್ನು ನಿರ್ಮಿಸುವ ಸಿದ್ಧತೆ ನಡೆಸುತ್ತಿದ್ದು, ಇವುಗಳ ಮೂಲಕ ಪಾಕಿಸ್ತಾನಕ್ಕೆ ಹೋಗುತ್ತಿದ್ದ ನದಿಗಳ ನೀರನ್ನು ತಡೆಹಿಡಿಯಲಾಗುವುದು ಎಂದು ಹೇಳಿದ್ದರು.