ಆತ್ಮಹತ್ಯೆಗೆ ಶರಣಾದ ಐಐಟಿ ಹೈದರಾಬಾದ್ ವಿದ್ಯಾರ್ಥಿ
ಐಐಟಿ ಹೈದರಾಬಾದ್ ವಿದ್ಯಾರ್ಥಿ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಲೇಜ್ ಕ್ಯಾಂಪಸ್ ನ ಹಾಸ್ಟೆಲ್ ರೂಂನಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ವರ್ಷ ಈ ಸಂಸ್ಥೆಯಲ್ಲಿ ಸಂಭವಿಸುತ್ತಿರುವ ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ.
ನವದೆಹಲಿ: ಐಐಟಿ ಹೈದರಾಬಾದ್ ವಿದ್ಯಾರ್ಥಿ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಲೇಜ್ ಕ್ಯಾಂಪಸ್ ನ ಹಾಸ್ಟೆಲ್ ರೂಂನಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ವರ್ಷ ಈ ಸಂಸ್ಥೆಯಲ್ಲಿ ಸಂಭವಿಸುತ್ತಿರುವ ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ.
ಆತ್ಮಹತ್ಯೆಯಾದ ಸ್ಥಳದಲ್ಲಿ ವಿದ್ಯಾರ್ಥಿ ಡೈರಿ ದೊರೆತಿದ್ದು, ಇದರಲ್ಲಿ ಉತ್ತಮ ಅಂಕಗಳು ದೊರೆಯದಿರುವುದರಿಂದಾಗಿ ಆತ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟಿರುವ ವ್ಯಕ್ತಿ 20 ವರ್ಷದ ವಿದ್ಯಾರ್ಥಿ ಮಾರ್ಕ್ ಆಂಡ್ರ್ಯೂ ಚಾರ್ಲ್ಸ್ ಎಂದು ಗುರುತಿಸಲಾಗಿದ್ದು, ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ತನ್ನ ಹಾಸ್ಟೆಲ್ ಕೋಣೆಗೆ ಹೋಗಿದ್ದ, ಆದರೆ ಅವನು ಹೊರಗೆ ಕಾಣದ ಹಿನ್ನಲೆಯಲ್ಲಿ ಅವನ ಸ್ನೇಹಿತರು ಮಂಗಳವಾರ ಮಧ್ಯಾಹ್ನ ಅವರ ಕೋಣೆಯ ಬಾಗಿಲು ತೆರೆದರು. ಆಗ ನೇಣು ಬಿಗಿದ ಸ್ಥಿತಿಯಲ್ಲಿ ಅವನ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾಸ್ಟರ್ ಇನ್ ಡಿಸೈನಿಂಗ್ ನ್ನು ಕಲಿಯುತ್ತಿರುವ ವಿದ್ಯಾರ್ಥಿ, ಕೆಲವು ದಿನಗಳ ಹಿಂದೆ ತನ್ನ ಅಂತಿಮ ವರ್ಷದ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾನೆ. ಇತನನ್ನು ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ನರಿಯಾ ಲಂಕಾ ಪ್ರದೇಶವನು ಎನ್ನಲಾಗಿದೆ.