2020 ರಲ್ಲಿ ಬಾಹ್ಯಾಕಾಶಕ್ಕೆ ಲಗ್ಗೆ ಇಡಲಿರುವ ಭಾರತೀಯ ಗಗನಯಾತ್ರಿ!
ಭಾರತೀಯ ಗಗನಯಾತ್ರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) 2022 ರಲ್ಲಿ ತರಬೇತಿ ಕಾರ್ಯಾಚರಣೆಗಾಗಿ ಸೊಯುಜ್ ಬಾಹ್ಯಾಕಾಶ ನೌಕೆಗೆ ಹೋಗಬಹುದು ಎಂದು .ರಷ್ಯಾದ ಬಾಹ್ಯಾಕಾಶ ಉದ್ಯಮದಲ್ಲಿ ಒಂದು ಮೂಲವನ್ನು ಉಲ್ಲೇಖಿಸಿ ರಷ್ಯಾ ಮಾಧ್ಯಮ ವರದಿ ಮಾಡಿದೆ.
ನವದೆಹಲಿ: ಭಾರತೀಯ ಗಗನಯಾತ್ರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) 2022 ರಲ್ಲಿ ತರಬೇತಿ ಕಾರ್ಯಾಚರಣೆಗಾಗಿ ಸೊಯುಜ್ ಬಾಹ್ಯಾಕಾಶ ನೌಕೆಗೆ ಹೋಗಬಹುದು ಎಂದು .ರಷ್ಯಾದ ಬಾಹ್ಯಾಕಾಶ ಉದ್ಯಮದಲ್ಲಿ ಒಂದು ಮೂಲವನ್ನು ಉಲ್ಲೇಖಿಸಿ ರಷ್ಯಾ ಮಾಧ್ಯಮ ವರದಿ ಮಾಡಿದೆ.
ಭಾರತೀಯರ ಸಹೋದ್ಯೋಗಿಗಳು ಐಎಸ್ಎಸ್ ಗೆ ಭೇಟಿ ನೀಡಬೇಕೆಂದು ರಷ್ಯಾ ಆಹ್ವಾನಿಸಿದೆ. ಭಾರತದ ಸ್ವತಂತ್ರ ಮಾವನನ ಬಾಹ್ಯಾಕಾಶ ಮಿಷನ್ 2022 ರ ವೇಳೆಗೆ ನಡೆಯಲಿದ್ದು, ಈ ಕುರಿತಾದ ಒಪ್ಪಂದಕ್ಕೆ ಭವಿಷ್ಯದಲ್ಲಿ ಸಹಿ ಹಾಕಲಾಗುವುದು ರಷ್ಯಾದ ಸುದ್ದಿ ಸಂಸ್ಥೆಯಾದ ಸ್ಪುಟ್ನಿಕ್ ಉಲ್ಲೇಖಿಸಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಭೂಮಿಯ ಕಕ್ಷೆಯಲ್ಲಿ ವಾಸಯೋಗ್ಯ ಕೃತಕ ಉಪಗ್ರಹವಾಗಿದೆ.
ಸ್ವಾತಂತ್ರ್ಯ ದಿನ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಗಗನಯಾತ್ರಿಗಳನ್ನು 2022 ರೊಳಗೆ ಸ್ವತಂತ್ರವಾಗಿ 'ಗಗನಯಾನ್' ಎನ್ನುವ ಮಹತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿದರು.ಆ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ.ಒಂದು ವೇಳೆ ಇದು ಯಶಸ್ವಿಯಾದರೆ, ಯುಎಸ್, ರಷ್ಯಾ ಮತ್ತು ಚೀನಾ ನಂತರ ಮಾನವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ನಾಲ್ಕನೇ ರಾಷ್ಟ್ರವಾಗಲಿದೆ.
ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಮೊದಲ ಭಾರತೀಯರಾಗಿದ್ದರು. ಶರ್ಮಾ ಸೋವಿಯತ್ ಒಕ್ಕೂಟದ ಸೊಯುಜ್ ಟಿ -11 ಯಾತ್ರೆಯ ಭಾಗವಾಗಿ ಏಪ್ರಿಲ್ 2, 1984 ರಂದು ಗಗನಯಾತ್ರೆ ಕೈಗೊಂಡಿದ್ದರು.ಇದಾದ ನಂತರ ಭಾರತದ ಮೂಲದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರು ಗಗನಯಾತ್ರೆ ಕೊಂಡ ವ್ಯಕ್ತಿಗಳಾಗಿದ್ದಾರೆ.