Indian Railway News: ಬಸ್, ಮೆಟ್ರೋಗಳಂತೆ ಇನ್ಮುಂದೆ ರೈಲುಗಳಲ್ಲಿಯೂ ಕೂಡ ಮಹಿಳೆಯರಿಗೆ ಸೀಟ್ ಮೀಸಲು
Indian Railway News: ದೀರ್ಘ ಪ್ರಯಾಣದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ ಆರು ಬರ್ತ್ಗಳ ಮೀಸಲಾತಿ ಕೋಟಾ ಮತ್ತು ಗರೀಬ್ ರಥ (Garib Rath), ರಾಜಧಾನಿ (Rajdhani), ದುರಾಂತೋ (Duranto) ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್‌ಗಳಲ್ಲಿ (3AC Class) ಆರು ಬರ್ತ್ಗಳ ಮೀಸಲಾತಿ ಮಹಿಳಾ ಪ್ರಯಾಣಿಕರಿಗೆ (Female Passengers) ಕೋಟಾವನ್ನು ನಿಗದಿಪಡಿಸಲಾಗಿದೆ.
ಹೊಸದಿಲ್ಲಿ: Indian Railway News - ರೈಲ್ವೇ ಇಲಾಖೆ ಮಹಿಳಾ ಯಾತ್ರಿಗಳಿಗೆ ಕೆಲ ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ. ಹೌದು, ಇನ್ಮುಂದೆ ಮಹಿಳೆಯರು ರೈಲಿನಲ್ಲಿ ಸೀಟಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಬಸ್ ಮತ್ತು ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟುಗಳನ್ನು ಹೇಗೆ ಮೀಸಲಿಡಲಾಗಿದೆಯೋ ಅದೇ ರೀತಿ ಇದೀಗ ಭಾರತೀಯ ರೈಲ್ವೇ (Indian Railways) ಕೂಡ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಿದೆ. ಈಗ ರೂರದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ವಿಶೇಷ ಬರ್ತ್‌ಗಳನ್ನು ಮೀಸಲಿರಿರುವ ಕೆಲಸ ರೇಲ್ವೆ ವಿಭಾಗ ಮಾಡಿದೆ.
ದೂರದ ರೈಲುಗಳಲ್ಲಿ ಮಹಿಳೆಯರ ಆರಾಮದಾಯಕ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇ ರಿಸರ್ವ್ ಬರ್ತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಆರಂಭಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮಹಿಳೆಯರಿಗೆಂದೇ ಮೀಸಲಿರಿಸಲಾಗಿದೆ ಬರ್ತ
ದೂರದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ ಆರು ಬರ್ತ್‌ಗಳನ್ನು ಕಾಯ್ದಿರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಗರೀಬ್ ರಥ, ರಾಜಧಾನಿ, ದುರಂತೋ ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್‌ನಲ್ಲಿ (3ಎಸಿ ವರ್ಗ) ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ಲೀಪರ್ ಕೋಚ್‌ನಲ್ಲಿಯೂ ಮೀಸಲಾತಿ
ಪ್ರತಿ ಸ್ಲೀಪರ್ ಕ್ಲಾಸ್‌ನಲ್ಲಿ ಆರರಿಂದ ಏಳು ಲೋವರ್ ಬರ್ತ್‌ಗಳು, ಹವಾನಿಯಂತ್ರಿತ 3 ಟೈರ್ (3 ಎಸಿ) ಕೋಚ್‌ಗಳಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್‌ಗಳು ಮತ್ತು ಹವಾನಿಯಂತ್ರಿತ 2 ಟೈಯರ್ (2 ಎಸಿ) ಕೋಚ್‌ಗಳಲ್ಲಿ ಮೂರರಿಂದ ನಾಲ್ಕು ಲೋವರ್ ಬರ್ತ್‌ಗಳು ಹಿರಿಯ ನಾಗರಿಕರಿಗೆ ಕಾಯ್ದಿರಿಸಲಾಗಿದೆ. , 45 ವರ್ಷ ಮತ್ತು ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರು. ರೈಲಿನಲ್ಲಿರುವ ಆ ವರ್ಗದ ಕೋಚ್‌ಗಳ ಸಂಖ್ಯೆಯ ಆಧಾರದ ಮೇಲೆ ಕಾಯ್ದಿರಿಸುವಿಕೆಯನ್ನು ನಿರ್ವಹಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-Indian Railways: 12ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ನೌಕರಿಯ ಅವಕಾಶ, ಇಂದೇ ಅರ್ಜಿ ಸಲ್ಲಿಸಿ
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ವ್ಯವಸ್ಥೆ
ಇನ್ನೊಂದೆಡೆ, 'ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. 'ಪೊಲೀಸ್' ಮತ್ತು 'ಸಾರ್ವಜನಿಕ ಆದೇಶ' ಭಾರತದ ಸಂವಿಧಾನದ ಏಳನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯದ ವಿಷಯಗಳಾಗಿವೆ, ಆದರೂ ಕೂಡ, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಜಿಆರ್‌ಪಿ ಮತ್ತು ಜಿಲ್ಲಾ ಪೊಲೀಸರು ಪ್ರಯಾಣಿಕರಿಗೆ ಉತ್ತಮ ಭದ್ರತೆಯನ್ನುಒದಗಿಸಲಿದ್ದಾರೆ ಎಂದು ಸಚಿವರು ಈ ವೇಳೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-Indian Railways: ಈಗ ಯಾವುದೇ ನಿಲ್ದಾಣದಿಂದ ರೈಲು ಹತ್ತಿದರೂ ಬೀಳಲ್ಲ ದಂಡ! ಇಲ್ಲಿದೆ IRCTC ಹೊಸ ನಿಯಮ
ಇದರೊಂದಿಗೆ ರೈಲು ಮತ್ತು ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗಾಗಿ ಜಿಆರ್‌ಪಿ ನೆರವಿನೊಂದಿಗೆ ರೈಲ್ವೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೈಲ್ವೇ ಸಂರಕ್ಷಣಾ ಪಡೆ ಕಳೆದ ವರ್ಷ 'ಮೇರಿ ಸಹೇಲಿ' ಎಂಬ ಪ್ಯಾನ್-ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದ್ದು, ತಮ್ಮ ಪ್ರಯಾಣದ ಉದ್ದಕ್ಕೂ ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-Indian Railways : ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ಈ ದಿನದಿಂದ ಇಳಿಕೆಯಾಗಲಿದೆ ರೈಲು ಪ್ರಯಾಣ ದರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.