ನವದೆಹಲಿ: ವೈಷ್ಣೋ ದೇವಿಯನ್ನು ಭೇಟಿ ಮಾಡುವ ಜನರಿಗೆ ಒಳ್ಳೆಯ ಸುದ್ದಿ ಇದೆ. ಮಾತಾ ವೈಷ್ಣೋದೇವಿಗೆ ಹೋಗುವ ಭಕ್ತರಿಗೆ ಪ್ರಯಾಣ ಶೀಘ್ರದಲ್ಲೇ ಸ್ವಲ್ಪ ಸುಲಭವಾಗುತ್ತದೆ. ರೈಲ್ವೆ ಪ್ರಯಾಣಿಕರ ಬೇಡಿಕೆಯಿಂದಾಗಿ, ಪಶ್ಚಿಮ ಬಂಗಾಳದ ಸೀಲ್ದಾದಿಂದ ಜಮ್ಮು ತಾವಿಗಾಗಿ ಹಮ್ಸಫರ್ ಎಕ್ಸ್ಪ್ರೆಸ್ ಅನ್ನು ಪರಿಚಯಿಸಲು ರೈಲ್ವೆ ಇಲಾಖೆ ತಯಾರಿ ನಡೆಸುತ್ತಿದೆ. ಜುಲೈ 3 ರಿಂದ ಈ ರೈಲು ಚಾಲನೆಗೊಳ್ಳಲಿದೆ. ಜಮ್ಮು ರಾಜ್ಯ ರೈಲ್ವೇ ಸಚಿವ ರಜೆನ್ ಗೋಹೈನ್ ಈ ರೈಲಿಗೆ ಜಮ್ಮುವಿನ ತವಿ ರೈಲ್ವೆ ನಿಲ್ದಾಣದಿಂದ ಚಾಲನೆ ನೀಡಲಿದ್ದಾರೆ.


COMMERCIAL BREAK
SCROLL TO CONTINUE READING

ಬಂಗಾಳ, ಬಿಹಾರ, ಜಾರ್ಖಂಡ್, ಯುಪಿ ಮತ್ತು ಪಂಜಾಬ್ ಜನರಿಗೆ ಅನುಕೂಲ
ಈ ಹಮ್ಸಫರ್ ಎಕ್ಸ್ಪ್ರೆಸ್ ಪ್ರಾರಂಭದೊಂದಿಗೆ, ಐದು ರಾಜ್ಯಗಳ ಜನರು ಮಾತಾ ವೈಷ್ಣೋ ದೇವಿಯನ್ನು ತಲುಪಲು ಸುಲಭವಾಗುತ್ತದೆ. ಈ ರೈಲು ಬಂಗಾಳ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಪಂಜಾಬ್ ಮೂಲಕ ಹಾದು ಹೋಗುತ್ತದೆ. ಜಮ್ಮುವಿನ ತಾವಿ, ಜಲಂಧರ್, ಅಂಬಾಲಾ, ಸಹರಾನ್ಪುರ್, ಮೊರಾದಾಬಾದ್, ಲಕ್ನೌ, ವಾರಣಾಸಿ, ಮೊಘಲಸಾಯಿ, ಗಯಾ, ಧನಬಾದ್, ಅಸನ್ಸೋಲ್ ಮತ್ತು ಸೀಲ್ದಾ ರೈಲು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ನೀಡಲಿದೆ.


ಚುನಾವಣೆಯಲ್ಲಿ ಈ ರೈಲಿನ ಪ್ರಭಾವ
ಈ ಹಮ್ಸಫರ್ ಎಕ್ಸ್ಪ್ರೆಸ್ ಕೂಡ ಮೋದಿ ಸರ್ಕಾರದ ಸಾಧನೆಯಾಗಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಇದೂ ಸಹ ಸ್ವಲ್ಪ ಮಟ್ಟಿಗೆ ತನ್ನ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ರೈಲು ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಪಂಜಾಬ್ ಮೂಲಕ ಹಾದು ಹೋಗುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಗೆ ಉತ್ತರ ಪ್ರದೇಶ ಮತ್ತು ಬಿಹಾರದ ಸಾಕಷ್ಟು ಪ್ರಮುಖ ಸ್ಥಾನಗಳು ಲಭಿಸಿತ್ತು. ಈ ಬಾರಿ, ಬಿಜೆಪಿಯು ಬಂಗಾಳದಲ್ಲಿ ಸಹ ಹೆಚ್ಚು ಸ್ಥಾನಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಈ ರೈಲನ್ನು ಒಂದು ಪ್ರಮುಖ ಸಾಧನೆಯಾಗಿ ಪ್ರಸ್ತುತಪಡಿಸಬಹುದು ಎಂದು ನಂಬಲಾಗಿದೆ.