ನವದೆಹಲಿ: ಭಾರತೀಯ ರೈಲ್ವೆ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಋಣಾತ್ಮಕ ವಿಷಯಗಳನ್ನು ಕೇಳುತ್ತಿದ್ದೇವೆ. ಆದರೆ ಈ ಬಾರಿ ಪ್ರತಿ ಭಾರತೀಯರು ಹೆಮ್ಮೆ ಪಡುವಂತಹ ಕೆಲಸವನ್ನು ಭಾರತೀಯ ರೈಲ್ವೆ ಇಲಾಖೆ ಮಾಡಿದೆ. ಈ ಸಾಧನೆ ಬಗ್ಗೆ ಕೇಳಿದರೆ- ಭಾರತೀಯ ರೈಲ್ವೆ ಯಾರಿಗಿಂತಲೂ ಕಡಿಮೆ ಇಲ್ಲ ಎಂದು ನೀವೇ ಹೇಳುತ್ತೀರಿ.
ಪೂರ್ವ ಕರಾವಳಿ ರೈಲು (ಇಸಿಆರ್) ಸೀಮಿತ ಸಬ್ವೇ ಸುರಂಗಮಾರ್ಗವನ್ನು ಐದು ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನಿರ್ಮಿಸಿ ದಾಖಲೆ ನಿರ್ಮಿಸಿದೆ. ಸಂಬಲ್ಪುರದ ಎಲ್ಲ ಮಾನವರಹಿತ ದಾಟುವಿಕೆಗಳು ಕೊನೆಗೊಂಡಿದೆ ಎಂದು ಸಂಬಲ್ಪುರ ವಿಭಾಗೀಯ ರೈಲ್ವೇ ಮ್ಯಾನೇಜರ್ ಡಾ.ಜೈದೇಪ್ ಗುಪ್ತಾ ತಿಳಿಸಿದರು.


COMMERCIAL BREAK
SCROLL TO CONTINUE READING

ಜುಲೈ 5 ರಂದು ಕೇವಲ ನಾಲ್ಕೂವರೆ ಗಂಟೆಗಳಲ್ಲಿ ಈ ಸುರಂಗ ನಿರ್ಮಾಣವಾಯಿತು ಎಂದು ಸಂಬಲ್ಪುರ ವಿಭಾಗೀಯ ರೈಲ್ವೇ ಮ್ಯಾನೇಜರ್ ಡಾ.ಜೈದೇಪ್ ಗುಪ್ತಾ ಹೇಳಿದ್ದಾರೆ. ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದು ಒಂದು ದೊಡ್ಡ ಸಾಧನೆಯಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ವೀಡಿಯೊ ಹಂಚಿಕೆ ಮೂಲಕ ಈ ಸಾಧನೆಯ ಬಗ್ಗೆ ತಿಳಿಸಿದ್ದಾರೆ.


ರೈಲುಗಳಲ್ಲಿ ಆಹಾರ ಹೇಗೆ ತಯಾರಾಗುತ್ತೆ ಗೊತ್ತಾ!


IRCTC ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವಿನಿ ಲೋಹಾನಿ ಇಂದು IRCTC ಯ ವೆಬ್ಸೈಟ್ನಲ್ಲಿ 'ಲೈವ್ ಸ್ಟ್ರೀಮಿಂಗ್' ವ್ಯವಸ್ಥೆಯನ್ನು ಉದ್ಘಾಟಿಸಿರುವುದಾಗಿ ಹೇಳಿದ್ದಾರೆ.