Indian Railways/IRCTC: ದೇಶದ ಕರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ (Indian Railways) ಮತ್ತೊಮ್ಮೆ ಅನೇಕ ರೈಲುಗಳನ್ನು ರದ್ದುಗೊಳಿಸಿದೆ. ಈ ರೈಲುಗಳನ್ನು ನಾಳೆ ಅಂದರೆ ಮೇ 21 ರಿಂದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲು ಉತ್ತರ ರೈಲ್ವೆ ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಈ ಮೊದಲು ಕೂಡ ಕರೋನಾವೈರಸ್ (Coronavirus) ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿನ ಕಡಿತವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಅನೇಕ ರೈಲುಗಳನ್ನು ರದ್ದುಗೊಳಿಸಲು ನಿರ್ಧರಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ನೀವು ರೈಲಿನಲ್ಲಿ ಪ್ರಯಾಣಿಸಲು ಯೋಜಿಸಿದ್ದರೆ, ಮನೆಯಿಂದ ಹೊರಡುವ ಮೊದಲು ರದ್ದಾದ ರೈಲುಗಳ ಪಟ್ಟಿಯನ್ನು ತಪ್ಪದೇ ಪರಿಶೀಲಿಸಿ.


ಇದನ್ನೂ ಓದಿ - ರೈಲ್ವೆ ನಿಲ್ದಾಣದಲ್ಲಿ 6,000 ನೇ ವೈ-ಫೈ ಅನ್ನು ನಿಯೋಜಿಸಿದ ಭಾರತೀಯ ರೈಲ್ವೆ


ರದ್ದಾದ ರೈಲುಗಳ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ರೈಲ್ವೆ:
ರದ್ದಾದ ಈ ರೈಲುಗಳ (Railways) ಬಗ್ಗೆ ಉತ್ತರ ರೈಲ್ವೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಲಭ್ಯವಿರದ ಕಾರಣ ಮುಂದಿನ ಆದೇಶದವರೆಗೂ ಈ ಕೆಳಗಿನ ರೈಲುಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಟ್ವೀಟ್‌ನಲ್ಲಿ ಬರೆದಿದೆ. 


Indian Railways : ಕೊರೋನಾಗೆ 1,952 ರೈಲ್ವೆ ಸಿಬ್ಬಂದಿಗಳು ಬಲಿ : ರೈಲ್ವೆ ಇಲಾಖೆ


ಈ ಮಾರ್ಗದ ರೈಲುಗಳನ್ನು ವಾರಕ್ಕೊಮ್ಮೆ ಓಡಿಸಲಾಗುವುದು:-
>> ರೈಲು ಸಂಖ್ಯೆ 09613: ಅಜ್ಮೀರ್-ಅಮೃತಸರ ವಿಶೇಷ - ವಾರಕ್ಕೆ 2 ದಿನಗಳ ಬದಲು 19.05.2021 ರಿಂದ, ಈಗ ಬುಧವಾರ ಮಾತ್ರ ಓಡಲಿದೆ.
>> ರೈಲು ಸಂಖ್ಯೆ 09614: ಅಮೃತಸರ-ಅಜ್ಮೀರ್ ವಿಶೇಷ - ವಾರಕ್ಕೆ 2 ದಿನಗಳ ಬದಲು 23.05.2021 ರಿಂದ, ಈಗ ಭಾನುವಾರದಂದು ಮಾತ್ರ ಚಲಿಸುತ್ತದೆ.
>> ರೈಲು ಸಂಖ್ಯೆ 09611: ಅಜ್ಮೀರ್-ಅಮೃತಸರ ವಿಶೇಷ - 22.05.2021 ರಿಂದ, ವಾರದಲ್ಲಿ 2 ದಿನಗಳ ಬದಲು, ಈಗ ಶನಿವಾರ ಮಾತ್ರ ಓಡಲಿದೆ.
>> ರೈಲು ಸಂಖ್ಯೆ 09612: ಅಮೃತಸರ-ಅಜ್ಮೀರ್ ವಿಶೇಷ - 20.05.2021 ರಿಂದ, ವಾರದಲ್ಲಿ 2 ದಿನಗಳ ಬದಲು, ಈಗ ಅದು ಗುರುವಾರ ಮಾತ್ರ ಚಾಲನೆಯಾಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.