ನವದೆಹಲಿ: ಇನ್ಮುಂದೆ ರೈಲಿನಲ್ಲಿ ಊಟದ ನಂತರ ಊಟದ ತಟ್ಟೆ ಹಾಗೂ ಪ್ಯಾಕ್ಗಳನ್ನು ಬಿಸಾಡುವಂತಿಲ್ಲ. ಅದಕ್ಕಾಗಿಯೇ ರೈಲ್ವೆ ಇಲಾಖೆ, ರೈಲಿನಲ್ಲಿ ಪ್ರಯಾಣಿಕರಿಂದ ಕಸ ಸಂಗ್ರಹಣೆಗಾಗಿ ನೌಕರರನ್ನು ನಿಯೋಜಿಸಲಿದೆ. ಇವರು ಊಟದ ಸಮಯದಲ್ಲಿ ಬ್ಯಾಗ್ ಹಿಡಿದು ಊಟದ ತಟ್ಟೆಗಳು ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸುವ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ರೈಲ್ವೆ ಮಂಡಳಿ ಅಧ್ಯಕ್ಷರಾದ ಅಶ್ವನಿ ಲೋಹನಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಆಹಾರದಿಂದ ಹಿಡಿದು ಶೌಚಾಲಯದವರೆಗೆ ವಿಮಾನ ಸೇವೆಯ ಹಲವು ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಭಾರತೀಯ ರೈಲ್ವೆ ಇಲಾಖೆ, ರೈಲಿನಲ್ಲಿ ಶುಚಿತ್ವವನ್ನು ಕಾಪಾಡಲು ನೂತನ ಕ್ರಮಗಳನ್ನು ಕೈಗೊಳ್ಳುತ್ತಿದೆ. 


ಈ ಸಂಬಂಧ ಜುಲೈ 17ರಂದು ನಡೆದ ವಿಭಾಗಿಯ ಮಟ್ಟದ ಅಧಿಕಾರಿಗಳು ಮತ್ತು ಬೋರ್ಡ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಲೋಹಾನಿ, ರೈಲಿನಲ್ಲಿ ಶುಚಿತ್ವವನ್ನು ಕಾಪಾಡಲು, ವಿಮಾನಗಳಲ್ಲಿ ಮಾಡುವಂತೆ, ಪ್ರಯಾಣಿಕರು ಆಹಾರ ಸೇವಿಸಿದ ನಂತರ ಪ್ಯಾಂಟ್ರಿ ಸಿಬ್ಬಂದಿಗಳು ಬ್ಯಾಗ್ಗಳನ್ನು ಹಿಡಿದು ಕಸ ಸಂಗ್ರಹಿಸಲಿದ್ದಾರೆ" ಎಂದು ಹೇಳಿದ್ದಾರೆ.


"ಸಾಮಾನ್ಯವಾಗಿ ಪ್ರಯಾಣಿಕರು ಊಟದ ನಂತರ ತಟ್ಟೆಗಳನ್ನು ಸೀಟಿನ ಕೆಳಗಡೆ ಇಡುತ್ತಾರೆ. ನಂತರ ಪ್ಯಾಂಟ್ರಿ ಸಿಬ್ಬಂದಿ ಬಂದು ಇವುಗಳನ್ನು ಒಂದರ ಮೇಲೆ ಒಂದರಂತೆ ಇಟ್ಟುಕೊಂಡು ತೆಗೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ತಟ್ಟೆಯಲ್ಲಿ ಉಳಿದ ಆಹಾರ ಕೆಳಗೆ ಬಿದ್ದು ಭೋಗಿಯಲ್ಲಿ ಶುಚಿತ್ವ ಹಾಳಾಗುತ್ತದೆ. ಅಷ್ಟೇ ಅಲ್ಲದೆ, ಪ್ರಯಾಣಿಕರು ಸಹ ಹಣ್ಣುಗಳ ಸಿಪ್ಪೆ, ಸ್ನ್ಯಾಕ್ಸ್ ಪ್ಯಾಕ್ ಕವರ್ಗಳನ್ನು ಅಲ್ಲಲ್ಲೇ ಬಿಸಾಕುತ್ತಾರೆ. ಇದನ್ನು ತಡೆಯುವ ಉದ್ದೇಶದಿಂದ ನೂತನ ಕ್ರಮವನ್ನು ಜಾರಿಗೆ ತರಲಾಗುತ್ತಿದೆ" ಎಂದು ಲೋಹಾನಿ ಹೇಳಿದ್ದಾರೆ.