ನವದೆಹಲಿ: ಟ್ರ್ಯಾಕ್ಗಳು ​​ಮತ್ತು ಇತರ ರೈಲ್ವೆ ಮೂಲಸೌಕರ್ಯಗಳ ಯೋಜನೆಯ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಡ್ರೋನ್ ಕ್ಯಾಮೆರಾಗಳನ್ನು ನಿಯೋಜಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.  


COMMERCIAL BREAK
SCROLL TO CONTINUE READING

ಈಗಾಗಲೇ ಅಂತಹ ಕ್ಯಾಮೆರಾಗಳನ್ನು ಅಳವಡಿಸಲು ಎಲ್ಲ ವಿಭಾಗೀಯ ರೈಲ್ವೇಗೆ ನಿರ್ದೇಶನ ನೀಡಲಾಗಿದೆ. ರೈಲ್ವೆ ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಮಾರ್ಗವನ್ನು ಕಂಡುಕೊಳ್ಳಲಾಗಿದೆ.


ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ, ಯೋಜನೆಯ ಮೇಲ್ವಿಚಾರಣೆ, ಪ್ರಮುಖ ಕಾರ್ಯಗಳ ಪ್ರಗತಿ, ಟ್ರ್ಯಾಕ್ ಮತ್ತು ತಪಾಸಣೆ ಸಂಬಂಧಿತ ಚಟುವಟಿಕೆಗಳ ಮೇಲ್ವಿಚಾರಣೆ ಚಟುವಟಿಕೆಗಳನ್ನು ಕೈಗೊಳ್ಳಲು ಡ್ರೋನ್ ಕ್ಯಾಮೆರಾಗಳನ್ನು  ಬಳಸಿಕೊಳ್ಳಲು ಭಾರತೀಯ ರೈಲ್ವೆ ನಿರ್ಧರಿಸಿದೆ.


ಟ್ರ್ಯಾಕ್ಗಳು ​​ಮತ್ತು ಇತರ ರೈಲ್ವೆ ಮೂಲಸೌಕರ್ಯಗಳ ಸುರಕ್ಷತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ನೈಜ-ಸಮಯದ ಒಳಹರಿವು ಒದಗಿಸುವಲ್ಲಿ ಡ್ರೋನ್ ಗಳು ಪ್ರಮುಖ ಪಾತ್ರವಹಿಸುತ್ತವೆ.


ಈ ಯೋಜನೆಯ ಅಡಿಯಲ್ಲಿ, ಮಧ್ಯಪ್ರದೇಶದ ಜಬಲ್ಪುರದ ಪ್ರಧಾನ ಕಛೇರಿಯು ಭಾರತದ ರೇಲ್ವೆ ವಿಭಾಗಗಳಲ್ಲಿ "ಡ್ರೋನ್" ಕ್ಯಾಮರಾಗಳನ್ನು ಅಳವಡಿಸಿದ ಮೊದಲ ವಿಭಾಗೀಯ ರೈಲ್ವೆಯಾಗಿದೆ. ಕಳೆದ ಮೂರು ವಾರಗಳಲ್ಲಿ ಜಬಲ್ಪುರ್ ವಿಭಾಗ, ಭೋಪಾಲ್ ವಿಭಾಗ ಮತ್ತು ಕೋಟಾ ವಿಭಾಗದಲ್ಲಿ ವೆಸ್ಟ್ ಸೆಂಟ್ರಲ್ ರೈಲ್ವೇಸ್ ಈಗಾಗಲೇ  ಡ್ರೋನ್ ಕ್ಯಾಮರಾಗಳ ಕಾರ್ಯಾಚರಣೆ ನಡೆಸಿದೆ.