ನವದೆಹಲಿ: ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳೂ ಸೇರಿದಂತೆ ಸುಮಾರು 8,500 ರೈಲ್ವೆ ನಿಲ್ದಾಣಗಳು ಸುಮಾರು 700 ಕೋಟಿ ರೂ. (110 ಮಿಲಿಯನ್ ಡಾಲರ್) ವೆಚ್ಚದಲ್ಲಿ Wi-Fi ಸೌಲಭ್ಯವನ್ನು ಹೊಂದಲಿವೆ. 


COMMERCIAL BREAK
SCROLL TO CONTINUE READING

ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆ ಭಾಗವಾಗಿ, ರಾಷ್ಟ್ರೀಯ ಸಾಗಣೆದಾರರು ಪ್ರಸ್ತುತ 216 ಪ್ರಮುಖ ನಿಲ್ದಾಣಗಳಲ್ಲಿ Wi-Fi ಸೇವೆಗಳನ್ನು ಒದಗಿಸಿದ್ದು, ಏಳು ದಶಲಕ್ಷ ರೈಲ್ವೆ ಪ್ರಯಾಣಿಕರು ಉಚಿತ ಇಂಟರ್ನೆಟ್ ಸೌಲಭ್ಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. 


"ಅಂತರ್ಜಾಲ ಸಂಪರ್ಕವು ದಿನನಿತ್ಯದ ಕೆಲಸದಲ್ಲಿ ಪ್ರಮುಖ ಅವಶ್ಯಕತೆಯಾಗಿದ್ದು, ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ನಾವು ಈ ಸೌಲಭ್ಯವನ್ನು ಒದಗಿಸುತ್ತೇವೆ" ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇತ್ತೀಚಿನ ಸಭೆಯಲ್ಲಿ ಯೋಜನೆಯ ಪ್ರಕಾರ, 1,200 ಕೇಂದ್ರಗಳಲ್ಲಿ ಪ್ರಾಥಮಿಕವಾಗಿ ರೈಲು ಪ್ರಯಾಣಿಕರಿಗೆ ಈ ಸೌಲಭಯವನ್ನು ಒದಗಿಸಲು ಗುರುತಿಸಲಾಗಿದೆ ಮತ್ತು ಸುಮಾರು 7,300 ಕೇಂದ್ರಗಳನ್ನು ಪ್ರಯಾಣಿಕರಿಗೆ ಮಾತ್ರವಲ್ಲದೆ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಸ್ಥಳೀಯ ಜನರಿಗೆ ಮಾತ್ರ ಮೀಸಲಿಡಲಾಗಿದೆ.


ಇ-ಆಡಳಿತವನ್ನು ಉತ್ತೇಜಿಸಲು ಗ್ರಾಮೀಣ ಭಾರತದ ಡಿಜಿಟಲ್ ಮೇಕ್ ಓವರ್ನ ಭಾಗವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ಈ ನಿಲ್ದಾಣಗಳಲ್ಲಿ Wi-Fi ಸೌಲಭ್ಯವನ್ನು ಸ್ಥಳೀಯ ಜನರಿಗೆ ಮಾತ್ರ ನೀಡಲಾಗುವುದು.


ಗ್ರಾಮೀಣ ಪ್ರದೇಶಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ Wi-FI ಯೊಂದಿಗೆ ಕಿಯೋಸ್ಕ್ಗಳಿವೆ. ಇದು ವೈ-ಪೈಗಳನ್ನೂ  ಡಿಜಿಟಲ್ ಹಾಟ್ ಸ್ಪಾಟ್ಗಳಾಗಿ ಮಾರ್ಪಡಿಸಿ, ಡಿಜಿಟಲ್ ಬ್ಯಾಂಕಿಂಗ್, ಆಧಾರ್ ನೋಂದಣಿ ಸೇವೆ, ಜನನ ಮತ್ತು ಮರಣ ಪ್ರಮಾಣಪತ್ರ ಸೇವೆ ಮತ್ತು ತೆರಿಗೆ, ಬಿಲ್ ಪಾವತಿ ಇತ್ಯಾದಿ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ.


ಇ-ವಾಣಿಜ್ಯ ಪೋರ್ಟಲ್ಗಳಿಂದ ಸರಕುಗಳನ್ನು ಪಡೆಯಲು ಮತ್ತು ಸ್ವೀಕರಿಸಲು ಕಿಯೋಸ್ಕ್ ಸ್ಥಳೀಯ ಜನರನ್ನು ಸಹ ಸಕ್ರಿಯಗೊಳಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.