ನವದೆಹಲಿ : ಹೋಳಿ ಹಬ್ಬದ ಸಂದರ್ಭದಲ್ಲಿನ ಹೆಚ್ಚಾಗುವ ಪ್ರಯಾಣಿಕರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 500 ವಿಶೇಷ ರೈಲುಗಳನ್ನು ಬಿಡಲು ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ವಿಶೇಷ ರೈಲುಗಳ ಪಟ್ಟಿಯನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ. ಈ ವರ್ಷ ಮಾರ್ಚ್ 2 ರಂದು ಹೋಳಿ ಆಚರಣೆ ನಡೆಯಲಿದ್ದು, ಹಬ್ಬದ ಸಮಯದಲ್ಲಿ 54 ಜೋಡಿ ವಿಶೇಷ ರೈಲುಗಳನ್ನೂ ಆರಂಭಿಸುವುದಾಗಿ ಸಚಿವಾಲಯ ಹೇಳಿದೆ. 


ಹೋಳಿ ವಿಶೇಷ ರೈಲುಗಳ 54 ಜೋಡಿಗಳಲ್ಲಿ ಹೌರಾ-ಮುಜಫರ್ ಪುರ್ ನಡುವೆ 5, ಹೌರಾ-ರಾಮ್ನಗರ ನಡುವೆ  4 ಮತ್ತು ಭಾಗಲ್ಪುರ್-ಸಹರ್ಸಾ ನಡುವೆ 45 ರೈಲುಗಳನ್ನು ಬಿಡಲು ನಿರ್ಧರಿಸಿದೆ. 


ಹಬ್ಬದ ಸಂದರ್ಭದಲ್ಲಿ 7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ವಿಶೇಷ ರೈಲುಗಳ ಪ್ರಯೋಜನ ಪಡೆಯಬಹುದಾಗಿದೆ. ಹೋಲಿ ಸಮಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 60 ಹೆಚ್ಚುವರಿ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಕಳೆದ ವರ್ಷ ಹೋಳಿ ಸಂದರ್ಭದಲ್ಲಿ 440 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷ 6 ಲಕ್ಷಕ್ಕೂ ಅಧಿಕ ರೈಲು ಪ್ರಯಾಣಿಕರು ವಿಶೇಷ ರೈಲುಗಳ ಲಾಭ ಪಡೆದಿದ್ದರು ಎಂದು ರಯ್ಲೇ ಅಧಿಕಾರಿಗಳು ತಿಳಿಸಿದ್ದಾರೆ.


ವರದಿಗಳ ಪ್ರಕಾರ, ಕೇಂದ್ರ ರೈಲ್ವೆ 26 ವಿಶೇಷ ರೈಲುಗಳನ್ನು, ಪಶ್ಚಿಮ ರೈಲ್ವೆ 4, ಉತ್ತರ ರೈಲ್ವೇಸ್ 270, ಎನ್ಸಿಆರ್ 4, ಎನ್ಇಆರ್ 16, ಡಬ್ಲ್ಯುಸಿಆರ್ 10, ಇಆರ್ 10, ಇಸಿಆರ್ 140, ಸೆಸಿಆರ್ 4, ಎಸ್ಆರ್ಆರ್ 4, ಎಸ್ಇ 8 ಮತ್ತು ಎಸ್ಸಿಆರ್ 2 ವಿಶೇಷ ರೈಲುಗಳು ಸಂಚರಿಸಲಿವೆ.