ನವದೆಹಲಿ: ಗುರುವಾರದಂದು ಡಾಲರ್ ಎಂದು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ನವಂಬರ್ 24. 2016 ರಂದು ಡಾಲರ್ ಎದುರು ಅತಿ ಕನಿಷ್ಠ ಮೌಲ್ಯ 68.86ಕ್ಕೆ ಕುಸಿದಿದ್ದ  ರೂಪಾಯಿ ಈಗ ಈ ಹಿಂದಿಗಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ. ಬುಸಿನೆಸ್ ಟುಡೆ ವರದಿ ಮಾಡಿರುವಂತೆ ಸದ್ಯದ ಡಾಲರ್ ಎದುರಿನ ರೂಪಾಯಿ ಮೌಲ್ಯ 69.10 ಎಂದು ತಿಳಿದುಬಂದಿದೆ. 


ರೂಪಾಯಿ ಮೌಲ್ಯದ ಕುಸಿತಕ್ಕೆ ಪ್ರಮುಖವಾಗಿ ಜಾಗತಿಕ ಮಾರುಕಟ್ಟೆಯಲ್ಲಿ  ಅಮೇರಿಕಾ ಇತರ ಮಿತ್ರ ರಾಷ್ಟ್ರಗಳಿಗೆ  ಇರಾನ್ ನಿಂದ ಆಯಿಲ್ ಉತ್ಪನ್ನಗಳ ಆಮದನ್ನು ನವಂಬರ್ ಒಳಗೆ ನಿಲ್ಲಿಸಲು ಕೇಳಿಕೊಂಡಿದೆ. ಇನ್ನೊಂದೆಡೆ ಗೆ ಲಿಬಿಯಾ ಮತ್ತು ಕೆನಡಾಗಳಲ್ಲಿಯೂ ಸಹಿತ ಆಯಿಲ್ ಉತ್ಪನ್ನಗಳ ಪೂರೈಕೆ ಕುಸಿತ ಕಂಡಿದೆ. ಆದ್ದರಿಂದಾಗಿ ಈಗ ಆಯಿಲ್ ಉತ್ಪನ್ನಗಳಲ್ಲಿ ಹೇರಳವಾಗಿ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.


ಇನ್ನೊಂದೆಡೆ ಭಾರತ ಇಡೀ ಜಗತ್ತಿನಲ್ಲಿ ಪೆಟ್ರೋಲಿಯಂ ಆಮುದು ಮಾಡಿಕೊಳ್ಳುವ ಮೂರನೆಯ ಅತಿ ದೊಡ್ಡ ರಾಷ್ಟ್ರ ಹೀಗಾಗಿ ಇದರ ಈ ಆಮದಿನ ಒತ್ತಡ ರೂಪಾಯಿ ಮೌಲ್ಯದ ಮೇಲೆ ಪ್ರಭಾವ ಬಿರಿದೆ ಎಂದು ತಿಳಿದುಬಂದಿದೆ.