ನವದೆಹಲಿ: ಭಾರತ ಮತ್ತು ಅಮೆರಿಕ ಬಿಟ್ಟು ಬೇರೆ ದೇಶಗಳಲ್ಲಿ ಯೂಟ್ಯೂಬ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿರುವ ನೆಟ್ಟಿಗರಿಗೆ ಗೂಗಲ್ ಕಹಿ ಸುದ್ದಿ ನೀಡಿದೆ. ಬರುವ ಜೂನ್ ತಿಂಗಳಿಂದ ಅಮೆರಿಕ ಆಚೆಯ ಯೂಟ್ಯೂಬರ್​ಗಳಿಗೆ ಪಾವತಿಸುವ ಹಣದಲ್ಲಿ ಶೇ.24 ರಷ್ಟು ತೆರಿಗೆ ಕಡಿತಗೊಳಿಸಬೇಕಾಗುವುದು ಎಂದು ಗೂಗಲ್ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಯೂಟ್ಯೂಬ್​ ನಡೆಸುವ ಗೂಗಲ್​ ಕಂಪೆನಿ ತನ್ನ ಯೂಟ್ಯೂಬರ್​​ಗಳಿಗೆ ಕಳುಹಿಸಿರುವ ಈಮೇಲ್​ನಲ್ಲಿ, 'ಅಮೆರಿಕದ ಹೊರಗಿನ ಯೂಟ್ಯೂಬ್(YouTube)​ ವಿಡಿಯೋ ಕ್ರಿಯೇಟರ್​​ಗಳಿಗೆ ಪಾವತಿ ಮಾಡುವ ಹಣದಲ್ಲಿ ಅಮೆರಿಕದ ತೆರಿಗೆಗಳನ್ನು ಕಡಿತಗೊಳಿಸಬೇಕಾಗಿರುವ' ಬಗ್ಗೆ ತಿಳಿಸಿದೆ. ಹೀಗಾಗಿ ವೀಕ್ಷಕರಿಂದ ಬರುವ ಆದಾಯದ ಮೊತ್ತದಲ್ಲಿ ಭಾರತೀಯ ಮತ್ತು ಅಮೆರಿಕೇತರ ಪ್ರದೇಶಗಳ ಯೂಟ್ಯೂಬರ್​ಗಳ ಆದಾಯದಲ್ಲಿ ಇಳಿಕೆ ಉಂಟಾಗಲಿದೆ.


ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಆತಂಕಕಾರಿ ಎಂದ ಕೇಂದ್ರ...!


'ಮುಂದಿನ ಕೆಲವು ವಾರಗಳಲ್ಲಿ ನಿಮ್ಮಿಂದ ಕಡಿತಗೊಳಿಸಬೇಕಾದ ತೆರಿಗೆ ಮೊತ್ತವನ್ನು ನಿರ್ಣಯ ಮಾಡುವುದಕ್ಕಾಗಿ ಆಡ್​​ಸೆನ್ಸ್​​ನಲ್ಲಿ ನಿಮ್ಮ ತೆರಿಗೆ ಮಾಹಿತಿಯನ್ನು ಸಲ್ಲಿಸಲು ನಾವು ಕೇಳಲಿದ್ದೇವೆ. ಮೇ 31, 2021ರೊಳಗೆ ನೀವು ಮಾಹಿತಿ ಸಲ್ಲಿಸದಿದ್ದಲ್ಲಿ ನಿಮ್ಮ ಒಟ್ಟು ಆದಾಯದ ಶೇ. 24 ರಷ್ಟನ್ನು ಗೂಗಲ್(Google) ಕಡಿತ ಮಾಡಬೇಕಾಗುವುದು' ಎಂದು ಅಧಿಕೃತ ಸಂದೇಶದಲ್ಲಿ ಹೇಳಿದೆ.


One Nation One Ration card: 'ಒನ್ ನೇಷನ್, ಒನ್ ರೇಷನ್ ‌'..ಯಾರಿಗೆಲ್ಲ ಲಾಭ?


ಜಾಹೀರಾತು ವೀಕ್ಷಣೆಗಳು, ಯೂಟ್ಯೂಬ್ ಪ್ರೀಮಿಯಂ, ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್‌ಗಳು ಮತ್ತು ಚಾನೆಲ್(Channel) ಸದಸ್ಯತ್ವಗಳ ಮೂಲಕ ಅಮೆರಿಕದ ವೀಕ್ಷಕರಿಂದ ಗಳಿಸುವ ಆದಾಯದಿಂದ ತೆರಿಗೆಯನ್ನು ಕಡಿತಗೊಳಿಸುವ ಪ್ರಸ್ತಾವನೆ ಇದಾಗಿದೆ. ಒಂದು ಪ್ಲಸ್​ ಪಾಯಿಂಟ್​ ಎಂದರೆ, ಸೂಕ್ತ ತೆರಿಗೆ ದಾಖಲೆಗಳನ್ನು ಒದಗಿಸಿದಲ್ಲಿ ಅಮೆರಿಕದ ಹೊರಗಿನ ವೀಕ್ಷಕರಿಂದ ಸಂಪಾದಿಸುವ ಹಣಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ನಿರ್ಲಕ್ಷ್ಯ ವಹಿಸಿದಲ್ಲಿ ಯೂಟ್ಯೂಬ್​​ನಿಂದ ಪಡೆಯುತ್ತಿರುವ ಸಂಪೂರ್ಣ ಮಾಸಿಕ ಗಳಿಕೆಯ ಮೇಲೆ ಶೇ. 24 ತೆರಿಗೆ ಕಟ್ಟಬೇಕು.


ನಾಳೆಯೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ, ತಪ್ಪಿದರೆ ಬುಧವಾರದವರೆಗೆ ಕಾಯಬೇಕು..!


ತೆರಿಗೆ ವಿವರ: ಉದಾಹರಣೆಗೆ, ಯೂಟ್ಯೂಬ್​ನಿಂದ ತಿಂಗಳಿಗೆ ಒಟ್ಟು 1000 ಡಾಲರ್ ಸಂಪಾದಿಸುತ್ತಿದ್ದು, ಅದರಲ್ಲಿ 100 ಡಾಲರ್​ ಅಮೆರಿಕದ ವೀಕ್ಷಕರಿಂದ ಬರುತ್ತಿದ್ದರೆ - ತೆರಿಗೆ(Tax) ಮಾಹಿತಿ ಸಲ್ಲಿಸಿದಲ್ಲಿ ಕೇವಲ 100 ಡಾಲರ್ ಮೇಲೆ ಶೇ. 15 ರಷ್ಟು ಅಂದರೆ 15 ಡಾಲರ್ ಕಟ್ಟಬೇಕು; ತೆರಿಗೆ ಮಾಹಿತಿ ಸಲ್ಲಿಸದಿದ್ದಲ್ಲಿ ಇಡೀ 1000 ಡಾಲರ್ ಮೇಲೆ ಶೇ. 24ರಷ್ಟು ಅಂದರೆ 240 ಡಾಲರ್ ಕಟ್ಟಬೇಕು. ಆದ್ದರಿಂದ ಅಮೆರಿಕದ ವೀಕ್ಷಕರು ಕಡಿಮೆ ಇರುವಂತಹ ಯೂಟ್ಯೂಬರ್​ಗಳೂ ಸೂಕ್ತ ಮಾಹಿತಿ ಸಲ್ಲಿಸಿ ಆದಾಯ ಪೋಲಾಗದಂತೆ ತಡೆಯಬಹುದು ಎಂದು ಗೂಗಲ್ ಎಚ್ಚರಿಸಿದೆ.


ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕನಾಗಿ ರವ್ನೀತ್ ಸಿಂಗ್ ಬಿಟ್ಟು ನೇಮಕ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.