ಇಂದು ಬಿಡುಗಡೆಯಾಗಲಿದೆ ದೇಶದ ಮೊಟ್ಟಮೊದಲ 5G ಸ್ಮಾರ್ಟ್ ಫೋನ್
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ರೊಸೆಸರ್ ಹೊಂದಿರುವ ಭಾರತದ ಮೊದಲ 5G ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಗೆ IQOO3 ಪಾತ್ರವಾಗಲಿದೆ.
ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿ iQOO ತನ್ನ ಮೊಟ್ಟಮೊದಲ 5G ಸ್ಮಾರ್ಟ್ ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. iQOO 3 ಹಲವು ವಿಧಗಳಲ್ಲಿ ವಿಶೇಷತೆಗಳಿಂದ ಕೂಡಿದೆ. ಈ ಸ್ಮಾರ್ಟ್ ಫೋನ್ ಬೆಲೆ ಕೂಡ ತುಂಬಾ ಆಕರ್ಷಕವಾಗಿ ಇರಲಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಬಿಡುಗಡೆಯಾದ Realme X50 Pro 5G ಸ್ಮಾರ್ಟ್ ಫೋನ್ ಬೆಲೆ ರೂ.37,999 ನಿಂದ ಆರಂಭಗೊಳ್ಳುತ್ತದೆ. ಏತನ್ಮಧ್ಯೆ iQOO 3 ಬೆಲೆಯೂ ಕೂಡ 35000 ರೂ.ಗಳ ಆಸುಪಾಸು ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ, ಕಂಪನಿ ಸ್ಮಾರ್ಟ್ ಫೋನ್ ಬೆಲೆ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಈ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳೇನು?
iQOO3 5G ಸ್ಮಾರ್ಟ್ ಫೋನ್ ಮೊಬೈಲ್ ಗೇಮ್ ಆಡುವವರನ್ನು ಹೆಚ್ಚು ಆಕರ್ಷಿಸಲಿದೆ. ಹೀಗಾಗಿ ಇದರಲ್ಲಿ ವಿಶೇಷವಾಗಿ ಪ್ರೆಶರ್ ಸೆನ್ಸಿಟಿವ್ ಗೇಮಿಂಗ್ ಗುಂಡಿಯನ್ನು ಅಳವಡಿಸಲಾಗಿದೆ. ಈ ಫೋನ್ 8 GB RAM ಹೊಂದಿರಲಿದ್ದು, ಅಂಡ್ರಾಯಿಡ್ 10 OS ಸಂಚಾಲಿತವಾಗಿರಲಿದೆ. iQOO3 ಸ್ಮಾರ್ಟ್ ಫೋನ್ 6.4 ಇಂಚಿನ ಫುಲ್ HD+AMOLED ದಿಸ್ಪ್ಲೆಇರಲಿದ್ದು, ಇದು 1080 x 2400 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಶನ್ ಹೊಂದಿರಲಿದೆ.
ಫೋನ್ ನ ಒಟ್ಟು ಮೂರು ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆ ಇದೆ, ಇದರಲ್ಲಿ 6GB, 8GB ಹಾಗೂ 12GB RAM ಗಳ ಮೂರು ಆವೃತ್ತಿಗಳು ಇರಲಿದ್ದು, ಇದು 128GB ಹಾಗೂ 256GB ಆಂತರಿಕ ಶೇಖರಣಾ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಲಿವೆ ಎನ್ನಲಾಗಿದೆ. ಫೋಟೋಗಳನ್ನು ಕ್ಲಿಕ್ಕಿಸಲು ಈ ಫೋನ್ ನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಇರಲಿದ್ದು, ಸೇಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾ ಇರುವ ಸಾಧ್ಯತೆ ಇದೆ. ಸುಮಾರು 4,370ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಫೋನ್ ಫೋಟೋಗ್ರಾಫಿ ಹವ್ಯಾಸ ಇರುವ ಗ್ರಾಹಕರನ್ನು ಕೂಡ ಆಕರ್ಷಿಸಲಿದೆ ಎನ್ನಲಾಗಿದೆ.