ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಬಜೆಟ್ ಕೋಟ್ಯಂತರ ರೂ.ಗಳನ್ನೂ ಮಿರಿಸುತ್ತಿದೆ. ಆದರೆ ನಮ್ಮ ಸ್ವತಂತ್ರ ಭಾರತದ ಮೊಟ್ಟ ಮೊದಲ ಬಜೆಟ್ ತೀರಾ ಕಡಿಮೆಯಾಗಿತ್ತು. ಹೌದು, 1947ರಲ್ಲಿ ಮೊಟ್ಟಮೊದಲ ಬಾರಿಗೆ ಮಂಡನೆಯಾದ ಬಜೆಟ್ ಆ ದಿನಗಳಲ್ಲಿನ ದೊಡ್ಡ ಚಲನಚಿತ್ರಗಳ ಆದಾಯಕ್ಕಿಂತಲೂ ಕಡಿಮೆ ಇತ್ತು. ಅಚ್ಚರಿ ಆಗುತ್ತಿದೆಯಲ್ಲವೇ? ಆದರೂ ಇದು ಸತ್ಯ. 


COMMERCIAL BREAK
SCROLL TO CONTINUE READING

200 ವರ್ಷಗಳ ಗುಲಾಮಗಿರಿಯ ನಂತರ ಆಗಸ್ಟ್ 15, 1947 ರ ರಾತ್ರಿ, ಭಾರತ ಬ್ರಿಟಿಷರಿಂದ ಸ್ವತಂತ್ರವಾದ 3 ತಿಂಗಳ ನಂತರ, ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಲಾಯಿತು. ಈ ಬಜೆಟ್ ಅನ್ನು ಆರ್.ಕೆ. ಶಣ್ಮುಗಂ ಶೆಟ್ಟಿ ಅವರು 1947 ರ ನವೆಂಬರ್ 26 ರಂದು ಸಂಜೆ 5 ಗಂಟೆಗೆ ಮಂಡಿಸಿದರು. ಈ ಬಜೆಟ್ ಇಡೀ ವರ್ಷಕ್ಕೆ ಆಗದೆ, ಕೇವಲ ಕೇವಲ ಏಳು ತಿಂಗಳ ಬಜೆಟ್ ಆಗಿ ಒಟ್ಟು 6.52 ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು. ಬಜೆಟ್ನ ಒಟ್ಟು ಆದಾಯ 172.77 ಕೋಟಿ ರೂ. ಆದರೆ ಒಟ್ಟು ವೆಚ್ಚ 178.77 ಕೋಟಿ ರೂ. ಆಗಿತ್ತು. 


ಈ ದಿನಗಳಲ್ಲಿನ ದೊಡ್ಡ ಚಲನಚಿತ್ರಗಳ ಆದಾಯಕ್ಕಿಂತ ಕಡಿಮೆ ಇತ್ತು. ಹಣಕಾಸು ಮಂತ್ರಿ ಚೆಟ್ಟಿ 1948-49 ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಿದ್ದರು. ಇದು ವಾರ್ಷಿಕ ಬಜೆಟ್ ಆಗಿದ್ದರೂ, 26.85 ಕೋಟಿ ರೂ.ಗಳ ಕೊರತೆ ಉಂಟುಮಾಡಿತ್ತು. ಈ ಬಜೆಟ್ನಲ್ಲಿ ಒಟ್ಟು ಆದಾಯ 230.52 ಕೋಟಿ ರೂ. ಆದರೆ ಒಟ್ಟು ವೆಚ್ಚ ರೂ 257.37 ಕೋಟಿ ರೂ. ಆಗಿತ್ತು.


ಯಾವುದೇ ಹೊಸ ತೆರಿಗೆ ವಿಧಿಸಿರಲಿಲ್ಲ
ಚೆಟ್ಟಿಯ ಬಜೆಟ್ ವಾಸ್ತವವಾಗಿ ಆ ಸಮಯದಲ್ಲಿ ಭಾರತದ ಆರ್ಥಿಕತೆಯ ವಿಮರ್ಶೆಯಾಗಿತ್ತು. ಹೊಸ ತೆರಿಗೆ ಪ್ರಸ್ತಾವನೆಯನ್ನು ಅದರಲ್ಲಿ ಪ್ರಸ್ತಾಪಿಸಿರಲಿಲ್ಲ. 95 ದಿನಗಳ ಹಿಂದಷ್ಟೇ ರಚನೆಯಾಗಿದ್ದ ಸ್ವತಂತ್ರ ಭಾರತ ಸರ್ಕಾರದ ಬಜೆಟ್ ಅದಾಗಿತ್ತು. ಹಾಗಾಗಿ ದೇಶದ ಮೊದಲ ಮಧ್ಯಂತರ ಬಜೆಟ್ ಮಂಡಿಸಿದ ಕೀರ್ತಿಯೂ ಷಣ್ಮುಗಂ ಚೆಟ್ಟಿ ಅವರಿಗೆ ಸಲ್ಲುತ್ತದೆ. 1948-49ರವರೆಗೆ ಬಜೆಟ್ ಭಾಷಣದಲ್ಲಿ ಚೆಟ್ಟಿಯು 'ಮಧ್ಯಂತರ ಬಜೆಟ್' ಪದವನ್ನು ಬಳಸಿದರು. ಅಲ್ಲಿಂದೀಚೆಗೆ, ಅಲ್ಪಾವಧಿಯ ಅಥವಾ ಕಡಿಮೆ ದಿನಗಳವರೆಗೆ ಪರಿಚಯಿಸುವ ಬಜೆಟ್ ಅನ್ನು 'ಮಧ್ಯಂತರ ಬಜೆಟ್' ಎಂದು ಕರೆಯಲಾಗುತ್ತದೆ.


ಭಾರತದ ಮೊದಲ ಬಜೆಟ್ ಮಂಡಿಸಿದ್ದು ಜೇಮ್ಸ್ ವಿಲ್ಸನ್ 
ಭಾರತದ ಮೊದಲ ಬಜೆಟ್ ಅನ್ನು ಜೇಮ್ಸ್ ವಿಲ್ಸನ್ ಮಂಡಿಸಿದರು. ಅವರು 1860ರ ಫೆಬ್ರವರಿ 18 ರಂದು ವೈಸ್ರಾಯ್ ಕೌನ್ಸಿಲ್ನಲ್ಲಿ ಮೊದಲ ಬಾರಿಗೆ ಮಂಡಿಸಿದರು. ವಿಲ್ಸನ್, ಕೌನ್ಸಿಲ್ ಆಫ್ ವೈಸ್ರಾಯ್ನ ಹಣಕಾಸು ಸದಸ್ಯರಾಗಿ ಮೊದಲ ಬಾರಿಗೆ ಆರ್ಥಿಕ ತಜ್ಞರಾಗಿ ನೇಮಕಗೊಂಡರು. ಅದಕ್ಕಾಗಿಯೇ ಜೇಮ್ಸ್ ವಿಲ್ಸನ್ ಅವರನ್ನು ಭಾರತೀಯ ಬಜೆಟ್ ಸ್ಥಾಪಕ ಎಂದು ಕರೆಯಲಾಗುತ್ತದೆ. 1860 ರ ನಂತರ ಪ್ರತಿವರ್ಷ ದೇಶದ ಹಣಕಾಸು ಸ್ಥಿತಿಯ ವಿವರಗಳನ್ನು ನೀಡುವ ಬಜೆಟ್ ಅನ್ನು ವೈಸ್ರಾಯ್ ಕೌನ್ಸಿಲ್ನಲ್ಲಿ ಮಂಡಿಸಲು ಪ್ರಾರಂಭಿಸಲಾಯಿತು.