Vande Bharat Express Train: ನೀವು ರೈಲುಗಳಲ್ಲಿ ಸಾಕಷ್ಟು ಬಾರಿ ಪ್ರಯಾಣಿಸಿರಬೇಕು. ರೈಲು ಹತ್ತಿದ ತಕ್ಷಣ ಹಸಿವಾಗುವುದು ಸಹಜ. ಈ ಹಸಿವು ನೀಗಿಸಲು, ಅನೇಕ ಜನರು ತಮ್ಮ ಮನೆಯಿಂದ ಆಹಾರವನ್ನು ತೆಗೆದುಕೊಂಡು ಹೋಗುತ್ತಾರೆ. ಮತ್ತೆ ಕೆಲವರು ರೈಲಿನಲ್ಲಿ ಸಿಗುವ ಆಹಾರವನ್ನು ಸೇವಿಸುತ್ತಾರೆ. ರೈಲಿನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಲಭ್ಯವಿದೆ. ಆದರೆ ಇದೀಗ ಈ ರೈಲಿನಲ್ಲಿ ಶುದ್ಧ ಸಸ್ಯಾಹಾರ ಮಾತ್ರ ಲಭಿಸುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಟಿಪ್ಪು, ತಾಳಗುಪ್ಪ ರೈಲುಗಳಿಗೆ ಒಡೆಯರ್, ಕುವೆಂಪು ಎಕ್ಸಪ್ರೆಸ್ ಎಂದು ಮರುನಾಮಕರಣ


ಭಾರತದ ಏಕೈಕ ಶುದ್ಧ ಸಸ್ಯಾಹಾರಿಗಳ ಈ ರೈಲಿನ ಹೆಸರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ವಂದೇ ಭಾರತ್ ಹೆಸರಿನಲ್ಲಿ ಇಲ್ಲಿಯವರೆಗೆ 3 ರೈಲುಗಳು ಸಂಚಾರ ಆರಂಭಿಸಿವೆ. ಇವು ದೇಶದಲ್ಲೇ ಅತ್ಯಂತ ವೇಗವಾಗಿ ಓಡುವ ರೈಲುಗಳಾಗಿವೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ 2 ರೈಲುಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಲಭ್ಯವಿದೆ. ಆದರೆ ದೆಹಲಿಯಿಂದ ಕತ್ರಾ ವೈಷ್ಣೋ ದೇವಿಗೆ ಹೋಗುವ ರೈಲಿನಲ್ಲಿ ಶುದ್ಧ ಸಸ್ಯಾಹಾರಿ ಆಹಾರ ಮಾತ್ರ ಲಭ್ಯವಿದೆ. ಈ ರೈಲು ಹತ್ತುವ ಪ್ರಯಾಣಿಕರಿಗೆ ಮಾಂಸ, ಮೊಟ್ಟೆ ಮುಂತಾದ ಯಾವುದೇ ವಸ್ತು ಸಿಗುವುದಿಲ್ಲ. ಅವರಿಗೆ ಸಸ್ಯಾಹಾರ ಮಾತ್ರ ಸಿಗುತ್ತದೆ. ರೈಲಿನ ಪ್ಯಾಂಟ್ರಿಯಲ್ಲಿ ಯಾವುದೇ ಮಾಂಸಾಹಾರಿ ವಸ್ತುಗಳನ್ನು ಇಡಲಾಗುವುದಿಲ್ಲ ಮತ್ತು ರೈಲ್ವೇ ಸಿಬ್ಬಂದಿ ಕೂಡ ರೈಲಿನಲ್ಲಿ ಅಂತಹ ಆಹಾರವನ್ನು ತಿನ್ನುವಂತಿಲ್ಲ.


ಯಾವುದೇ ಪ್ರಯಾಣಿಕರು ಮಾಂಸಾಹಾರ ಸೇವಿಸುವಂತಿಲ್ಲ : 


ವಿಶೇಷವೆಂದರೆ ಶುದ್ಧ ಸಸ್ಯಾಹಾರಿ ಆಹಾರವನ್ನು ನೀಡುತ್ತಿರುವ ಈ ರೈಲಿನಲ್ಲಿ ಸ್ವಚ್ಛತೆಯ ಬಗ್ಗೆಯೂ ವಿಶೇಷ ಗಮನ ಹರಿಸಲಾಗಿದೆ. ಇದನ್ನು IRCTC ಮತ್ತು NGO ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಜಂಟಿಯಾಗಿ ಮೇಲ್ವಿಚಾರಣೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇಬ್ಬರ ನಡುವೆ ಒಪ್ಪಂದವೂ ನಡೆದಿದೆ. ಈ ರೈಲು ಹತ್ತುವ ಯಾವುದೇ ಪ್ರಯಾಣಿಕರು ಕೂಡ ರೈಲಿನಲ್ಲಿ ಮನೆಯಿಂದ ತಂದ ನಾನ್ ವೆಜ್ ಫುಡ್ ತಿನ್ನುವಂತಿಲ್ಲ ಎಂಬುದೇ ವಿಶೇಷ. ಈ ಎರಡೂ ವೈಶಿಷ್ಟ್ಯಗಳಿಂದಾಗಿ ಈ ರೈಲಿಗೆ ʻಸಾತ್ವಿಕʼ ಪ್ರಮಾಣಪತ್ರವೂ ಸಿಕ್ಕಿದೆ.


ಇದನ್ನೂ ಓದಿ : ಯುವ ಉದ್ಯಮಿ ಭರತ್ ಬಿ ಬೊಮ್ಮಾಯಿಗೆ 'ಅಂತರಾಷ್ಟ್ರೀಯ ಪ್ರಶಸ್ತಿ' ಗರಿ


ಏಕೆ ಈ ರೈಲನ್ನು ಸಸ್ಯಾಹಾರಿಯನ್ನಾಗಿ ಮಾಡಿದೆ?


ಈ ರೈಲು (ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು) ದೆಹಲಿಯಿಂದ ಕತ್ರಾ ವೈಷ್ಣೋದೇವಿಗೆ (ದೆಹಲಿ-ಕತ್ರಾ ರೈಲು) ಹೋಗುತ್ತದೆ. ಈ ರೈಲಿನಲ್ಲಿ ಹತ್ತುವ ಸುಮಾರು 80 ಪ್ರತಿಶತ ಪ್ರಯಾಣಿಕರು ವೈಷ್ಣೋದೇವಿಗೆ ಹೋಗುತ್ತಾರೆ. ಅವರು ತಾಯಿಯ ದರ್ಶನವನ್ನು ಪಡೆಯಲು ಶುದ್ಧ ಆತ್ಮದಿಂದ ಅಲ್ಲಿಗೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಾಂಸಾಹಾರದಿಂದ ಅವರ ಮನಸ್ಸು ಕೆಡುತ್ತದೆ. ಅದೇ ಸಮಯದಲ್ಲಿ, ಸಸ್ಯಾಹಾರಿಗಳು ಆಹಾರವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಇದರಿಂದ ರೈಲ್ವೆ ಇಲಾಖೆಗೆ ಸಾಕಷ್ಟು ತೊಂದರೆಯಾಗುತ್ತದೆ. ಆದ್ದರಿಂದ, ಸೂಕ್ತ ಸಮಾಲೋಚನೆಯ ನಂತರ, ರೈಲ್ವೇ ಇಲಾಖೆ ಈ  ರೈಲನ್ನು ಸಾತ್ವಿಕ ಎಂದು ಘೋಷಿಸಲು ನಿರ್ಧರಿಸಿತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.