ನವದೆಹಲಿ: ಆರ್‌ಬಿಐನ ಇತ್ತೀಚಿನ ಮಾಹಿತಿಯ ಪ್ರಕಾರ, ಜೂನ್ 5 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಮೊದಲ ಬಾರಿಗೆ ಅರ್ಧ-ಟ್ರಿಲಿಯನ್ ಗಡಿ ದಾಟಿದೆ.


COMMERCIAL BREAK
SCROLL TO CONTINUE READING

ವಾರದ ವರದಿ ಸಂದರ್ಭದಲ್ಲಿ ವಿನಿಮಯ ಸಂಗ್ರಹ  501.70 ಶತಕೋಟಿ ಡಾಲರ್‌ಗೆ ಏರಿತು, ಇದು ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಿ (ಎಫ್‌ಸಿಎ) ಭಾರಿ ಏರಿಕೆಯಾಗಿದೆ.ಮೇ 29 ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ, ಮೀಸಲು 3.44 ಬಿಲಿಯನ್ ಡಾಲರ್‌ನಿಂದ 493.48 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿತ್ತು. ಜೂನ್ 5 ಕ್ಕೆ ಕೊನೆಗೊಂಡ ವಾರದಲ್ಲಿ, ಒಟ್ಟಾರೆ ಮೀಸಲುಗಳ ಪ್ರಮುಖ ಅಂಶವಾಗಿರುವ ಎಫ್‌ಸಿಎ 8.42 ಬಿಲಿಯನ್ ಡಾಲರ್  ಏರಿಕೆಯಿಂದಾಗಿ 463.63 ಬಿಲಿಯನ್ ಡಾಲರ್‌ಗೆ ತಲುಪಿತ್ತು.


ವಾರದ ವರದಿಯಲ್ಲಿ ಚಿನ್ನದ ಸಂಗ್ರಹ 329 ಮಿಲಿಯನ್ ಡಾಲರ್ ಇಳಿದು 32.352 ಬಿಲಿಯನ್ ಡಾಲರ್ಗಳಿಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಅಂಕಿ ಅಂಶಗಳು ತಿಳಿಸಿವೆ. ಐಎಂಎಫ್‌ನೊಂದಿಗಿನ ದೇಶದ ವಿನಿಮಯ ಸ್ಥಾನವು ವರದಿಯ ವಾರದಲ್ಲಿ 120 ಮಿಲಿಯನ್ ಯುಎಸ್ಡಿ ಏರಿಕೆಯಾಗಿ 4.28 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಡೇಟಾ ತೋರಿಸಿದೆ.


ಸೆಪ್ಟೆಂಬರ್ 20, 2019 ರಿಂದ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದಾಗ, ವಿದೇಶೀ ವಿನಿಮಯ ಸಂಗ್ರಹವು ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದೆ ಮತ್ತು ಮಾರ್ಚ್ 6, 2020 ಕ್ಕೆ ಕೊನೆಗೊಂಡ ವಾರದಲ್ಲಿ  487.23 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿಕಚ್ಚಾ ತೈಲ ಬೆಲೆಗಳು ತೀವ್ರ ಕುಸಿದದ್ದು ಭಾರತಕ್ಕೆ ಅನುಕೂಲವಾಗಿದೆ.