ನವದೆಹಲಿ: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಆರ್ಥಿಕತೆಯನ್ನು ಈ ವರ್ಷ ಶೇಕಡಾ 6.1 ಕ್ಕೆ ಇಳಿಸಿದ ನಂತರ ಈಗ ಅದು 2020 ರಲ್ಲಿ ಶೇಕಡಾ 7ಕ್ಕೆ ವೃದ್ದಿಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ಪಾದನೆಯಿಂದ ಹಣಕಾಸು ವಲಯದಲ್ಲಿನ ತೀವ್ರ ಒತ್ತಡ ಮತ್ತು ಗ್ರಾಹಕರಿಗೆ ಹೆಚ್ಚಿನ ಸಾಲವನ್ನು ನೀಡುವ ಸಣ್ಣ ಹಣಕಾಸು ಸಂಸ್ಥೆಗಳ ಸಾಲ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಈಗ 2020 ರಲ್ಲಿನ ಭಾರತದ ಆರ್ಥಿಕ ಬೆಳವಣಿಗೆ ಕುರಿತ ಐಎಂಎಫ್ ಹೇಳಿಕೆ ಆಶಾವಾದವನ್ನು ಹೆಚ್ಚಿಸಿದೆ ಎನ್ನಬಹುದು.


ಈ ಕುರಿತಾಗಿ ಸುದೀರ್ಘವಾಗಿ ಮಾತನಾಡಿರುವ ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ' ಭಾರತ 2019 ರಲ್ಲಿ ಹಲವು ವಲಯಗಳಲ್ಲಿ ಕುಸಿತವನ್ನು ಕಂಡಿದೆ. ನಾವು ಈ ಬೆಳವಣಿಗೆಯನ್ನು ಚಕ್ರದ ಕುಸಿತ ಎಂದು ಭಾವಿಸಿದ್ದೇವೆ, ನಾವು ಭಾರತದ ಬೆಳವಣಿಗೆಯನ್ನು 2019 ರಲ್ಲಿ  ಶೇ 6.1 ಕ್ಕೆ ಇಳಿಸಿದ್ದೇವೆ. ಆದಾಗ್ಯೂ, ನಾವು ಅದನ್ನು 2020 ರಲ್ಲಿ ಶೇಕಡಾ 7 ಕ್ಕೆ ತಲುಪುವ ಸಾಧ್ಯತೆ ಇದೆ ' ಎಂದು ಹೇಳಿದರು.


ಮೈಸೂರು ಮೂಲದ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರು 2019 ರ ಜನವರಿಯಲ್ಲಿ ಐಎಂಎಫ್ ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕವಾಗಿದ್ದರು.