ನವದೆಹಲಿ: ಸತತ ಆರನೇ ದಿನವೂ ಗಗನಕ್ಕೇರಿರುವ ಚಿನ್ನದ ದರ ಸುಮಾರು 25 ಪ್ರತಿಶತದಷ್ಟು ಏರಿಕೆಯಾಗಿದ್ದು, ಸೋಮವಾರ 10 ಗ್ರಾಂ ಚಿನ್ನದ ದರ ದಾಖಲೆಯ ಗರಿಷ್ಠ ಮಟ್ಟ 39,196 ರೂ. ತಲುಪಿದೆ.


COMMERCIAL BREAK
SCROLL TO CONTINUE READING

ಕಳೆದ ಮಂಗಳವಾರದಿಂದ ಹಳದಿ ಲೋಹ(ಚಿನ್ನ)ದ ಬೆಲೆ ಪ್ರತಿದಿನ ಹೊಸ ದಾಖಲೆಯನ್ನು ಮುಟ್ಟುತ್ತಿದೆ. 


ಬೆಳ್ಳಿ ಶೇಕಡಾ 1 ರಷ್ಟು ಹೆಚ್ಚಳಗೊಂಡು ಪ್ರತಿ ಕೆ.ಜಿ.ಗೆ 45,058 ರೂ.ಗೆ ತಲುಪಿದೆ, ಹಿಂದಿನ ದಿನದಲ್ಲಿ 45,148 ರೂಪಾಯಿಗಳಿಗೆ ಏರಿತು. ಇದು ಅಕ್ಟೋಬರ್ 2016 ರಿಂದೀಚೆಗಿನ ಅಧಿಕ ಬೆಲೆಯಾಗಿದೆ.


ಫೆಡ್ ಒಂದು ವಿತ್ತೀಯ ಹಣಕಾಸು ನೀತಿ ನಿಲುವಿನತ್ತ ಸಾಗುತ್ತಿದೆ ಎಂಬ ಯುಎಸ್ ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪೊವೆಲ್ ಅವರ ಭಾಷಣದ ನಂತರ ಶುಕ್ರವಾರ ಚಿನ್ನದ ಬೆಲೆಗಳು ಶೇಕಡಾ 2 ರಷ್ಟು ಏರಿಕೆಯಾಗಿದೆ.