ದುಬೈ: ಯುಎಇಯೊಂದಿಗಿನ ಭಾರತದ ಸಂಬಂಧವು ಖರೀದಿದಾರ ಮತ್ತು ಮಾರಾಟಗಾರ ಸಂಬಂಧವನ್ನು ಮೀರಿದ್ದು ಎಂದು  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ದುಬೈ ಒಪೇರಾ ಹೌಸ್ನಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು,"ಇಂದು, ಯುಎಇ ಅಥವಾ ಇತರ ಕೊಲ್ಲಿ ರಾಷ್ಟ್ರಗಳೆಂದರೆ, ಅವರೊಂದಿಗೆ ನಮ್ಮ ಸಂಬಂಧವು  ಕೇವಲ ಖರೀದಿದಾರ ಮತ್ತು ಮಾರಾಟಗಾರದ್ದಲ್ಲ , ಬದಲಾಗಿ ಅದನ್ನು ಮೀರಿದ್ದು ಎಂದು ಹೇಳಿದರು .ತಮ್ಮ ಸರ್ಕಾರವು ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುಂದೆ ತರಲು ಪ್ರಯತ್ನಿಸುತ್ತಿದೆ ಎಂದು ಮೋದಿ ತಿಳಿಸಿದರು.


ಇದೆ ಸಂದರ್ಭದಲ್ಲಿ ವಿಶ್ವ ಬ್ಯಾಂಕಿನ ವಾಣಿಜ್ಯ ಪಟ್ಟಿಯಲ್ಲಿ 142 ರಿಂದ 100 ರವರೆಗೆ ಹೆಚ್ಚ್ಳವಾಗಿರುವುದನ್ನು ಪ್ರಸ್ತಾಪಿಸಿದ ಅವರು, ಈ ಬಗ್ಗೆ ತಾವು ಇನ್ನು ತೃಪ್ತಿ ಹೊಂದಿಲ್ಲ, ಆದ್ದರಿಂದ ಇನ್ನು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು. ತಮ್ಮ ಸರ್ಕಾರದ ಅಪಮಾನ್ಯಿಕರಣ ಮತ್ತು ಜಿಎಸ್ಟಿ ನಿರ್ಧಾರಗಳನ್ನು ಅವರು ಪ್ರಶಂಸಿಸಿದರು.