ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ​​ಇಂಡಿಗ್ಲೋಬ್ ಏವಿಯೇಶನ್ನಿಂದ ಇಂಡಿಗೊ ಮೆಗಾ ಆಫರ್ ಘೋಷಿಸಿದೆ. ತನ್ನ 12 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಇಂಡಿಗೋ ನಾಲ್ಕು ದಿನಗಳ ಸೇಲ್ ಆರಂಭಿಸಿದೆ. ಈ ಆಫರ್ ಅಡಿಯಲ್ಲಿ ಪ್ರಯಾಣಿಕರು ಕೇವಲ 1212 ರೂ.ಗಳಿಗೆ ಟಿಕೆಟ್ ಬುಕ್ ಮಾಡಬಹುದು. ಮಂಗಳವಾರದಿಂದ ಈ ಸೇಲ್ ಆರಂಭವಾಗಿದ್ದು, 4 ದಿನಗಳಿಗೆ ಮಾತ್ರ ಸೀಮಿತವಾಗಿದೆ.  ಅವಧಿಯಲ್ಲಿ ನೀವು ಜುಲೈ 25, 2018 ರಿಂದ ಮಾರ್ಚ್ 30, 2019 ವರೆಗಿನ ಪ್ರಯಾಣಕ್ಕೆ ಟಿಕೆಟ್ಗಳನ್ನು  ಬುಕ್ ಮಾಡಬಹುದು. ಈ ಮೆಗಾ ಆಫರ್'ನಲ್ಲಿ 12 ಲಕ್ಷ ಟಿಕೆಟ್ಗಳನ್ನು ಕಡಿಮೆ ದರದಲ್ಲಿ ಮಾರಾಟಮಾಡಲು ಇಂಡಿಗೋ ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಏನಿದು ಇಂಡಿಗೊ ಮೆಗಾ ಆಫರ್? 
57 ನಗರಗಳ ನಡುವೆ ವಿಮಾನ ಸೇವೆ ನೀಡುತ್ತಿರುವ ಇಂಡಿಗೋ ಏರ್ಲೈನ್ಸ್, 12 ಲಕ್ಷ ಟಿಕೆಟ್ಗಳಲ್ಲಿ ಶೇ.25ರಷ್ಟು ರಿಯಾಯಿತಿ ನೀಡಿದೆ. ಜುಲೈ 10 ರಿಂದ ಜುಲೈ 13 ರವರೆಗಿನ ಈ ಮೆಗಾ ಆಫರ್'ನಲ್ಲಿ ಇಂಡಿಗೊ ಸೀಟುಗಳು 1212 ರೂ.ನಿಂದ ಆರಂಭವಾಗಲಿದೆ. ಉಳಿದ ಟಿಕೆಟ್ಗಳಲ್ಲಿಯೂ ಶೇ.25ರ ವರೆಗಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ನಿಂದ ಕನಿಷ್ಠ 3000 ರೂ. ಬೆಲೆಯ ಟಿಕೆಟ್ ಬುಕ್ ಮಾಡುವವರಿಗೆ ಶೇ.5ರಷ್ಟು ಹೆಚ್ಚುವರಿ ಕ್ಯಾಶ್ಬ್ಯಾಕ್ (ಗರಿಷ್ಟ 500 ರೂ.) ಸಹ ದೊರೆಯಲಿದೆ. 


ಹಿಂದೆಂದಿಗಿಂತಲೂ ದೊಡ್ಡ ಸೇಲ್
ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಗೊದ ಮುಖ್ಯ ಕಾರ್ಯತಂತ್ರ ಅಧಿಕಾರಿ ವಿಲಿಯಮ್ ಬುಲ್ಟರ್, "ಇಂಡಿಗೊ ತನ್ನ ಕಾರ್ಯಾಚರಣೆ ಆರಂಭಿಸಿ 4 ಆಗಸ್ಟ್ 2018ಕ್ಕೆ 12 ವರ್ಷಗಳನ್ನು ಪೂರೈಸಲಿದೆ. ಈ ಸಂದರ್ಭದಲ್ಲಿ ಏರ್ಲೈನ್ ​​57 ನಗರಗಳಿಗೆ 12 ಲಕ್ಷ ಸೀಟುಗಳಿಗೆ ವಿಶೇಷ ಕೊಡುಗೆ ಘೋಷಣೆ ಮಾಡಿದೆ ಎಂದಿದ್ದಾರೆ. 


6E ನೆಟ್ವರ್ಕ್ನಲ್ಲಿ ಕೊಡುಗೆಗಳು
ಪ್ರಸಿದ್ಧ ಇಂಡಿಗೊ ವಿಮಾನಯಾನ ಸಂಸ್ಥೆಯು ಈ ಕಂಪನಿಯ 6E ನೆಟ್ವರ್ಕ್ನಲ್ಲಿ ಅಗ್ಗದ ದರಗಳಿಗೆ ಟಿಕೆಟ್ ಆಫರ್ ನೀಡಿದೆ. ಈ ನೆಟ್ವರ್ಕ್ ಇಂಡಿಗೊ ಅಂತರಾಷ್ಟ್ರೀಯ ವಿಮಾನಗಳನ್ನೂ ಸಹ ಒಳಗೊಂಡಿದೆ.  ದೇಶೀಯ ಮಾರುಕಟ್ಟೆ ಪಾಲುದಾರಿಕೆಯಲ್ಲಿ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಪ್ರಸ್ತುತ 1086 ವಿಮಾನಗಳನ್ನು ಹೊಂದಿದೆ. ಇದರಲ್ಲಿ 42 ದೇಶೀಯ ಮತ್ತು 8 ಅಂತರರಾಷ್ಟ್ರೀಯ ಮಾರ್ಗಗಳಿವೆ.