ಪೈಲೆಟ್ ಕೊರತೆಯಿಂದಾಗಿ 130 ಇಂಡಿಗೋ ವಿಮಾನಗಳ ರದ್ದು
ಕಳೆದ ಶನಿವಾರದಿಂದ ನಾನಾ ಕಾರಣಗಳಿಗೆ ಇಂಡಿಗೋ ವಿಮಾನಗಳ ಹಾರಾಟ ರದ್ದಾಗುತ್ತಿದ್ದು, ಏರ್ಲೈನ್ಸ್ ಒಟ್ಟು ವಿಮಾನಗಳ ಹಾರಾಟದಲ್ಲಿ ಶೇ.10 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ.
ನವದೆಹಲಿ: ಪೈಲೆಟ್ ಗಳ ಕೊರತೆ ಹಾಗು ಇತರ ಕಾರಣಗಳಿಂದಾಗಿ ಇಂಡಿಗೋ ಶುಕ್ರವಾರ ಸುಮಾರು 130 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.
ಕಳೆದ ಶನಿವಾರದಿಂದ ನಾನಾ ಕಾರಣಗಳಿಗೆ ಇಂಡಿಗೋ ವಿಮಾನಗಳ ಹಾರಾಟ ರದ್ದಾಗುತ್ತಿದ್ದು, ಏರ್ಲೈನ್ಸ್ ಒಟ್ಟು ವಿಮಾನಗಳ ಹಾರಾಟದಲ್ಲಿ ಶೇ.10 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ವಕ್ತಾರ ವೊಲ್ಫ್ ಗ್ಯಾಂಗ್ ಪ್ರೋಕ್ ಶೌರ್, ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ದತ್ತ ಮಂಜು ಮತ್ತು ಮಳೆಯ ಕಾರಣಗಳಿಂದಾಗಿ ವಿಮಾನಯಾನ ಸಂಸ್ಥೆ ವಿಮಾನಗಳ ಹಾರಾಟ ರದ್ದುಪಡಿಸುತ್ತಿದೆ. ಇದರಿಂದಾಗಿ ಇಂಡಿಗೋ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಹಾಗಿದ್ದರೂ, ನಿಗದಿತ ರದ್ದತಿ ಹೊರತುಪಡಿಸಿ ಯಾವುದೇ ಹೆಚ್ಚುವರಿ ವಿಮಾನಗಳ ಹಾರಾಟ ರದ್ದುಪಡಿಸಿಲ್ಲ ಎಂದು ಇಂಡಿಗೋ ವಕ್ತಾರ ಸ್ಪಷ್ಟಪಡಿಸಿದ್ದಾರೆ.
ಈ ಹಿಂದಿನ ಪಿಟಿಐ ವರದಿ ಪ್ರಕಾರ, ಸೋಮವಾರ 30 ವಿಮಾನಗಳನ್ನು ಮತ್ತು ಮಂಗಳವಾರ 32 ವಿಮಾನಗಳ ಹಾರಾಟವನ್ನು ಇಂಡಿಗೋ ರದ್ದುಪಡಿಸಿತ್ತು. ಇವುಗಳಲ್ಲಿ ಕೊಲ್ಕತ್ತಾ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಹೆಚ್ಚು ವಿಮಾನಗಳು ರದ್ದಾಗಿದ್ದವು.